Publish Date: Wed, 12 Feb 2020 (09:16 IST)
Updated Date: Wed, 12 Feb 2020 (09:17 IST)
ಲಕ್ನೋ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ನೆರೆಮನೆಯಾತ ಬಳಿಕ ಆಕೆಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಿತಾಪುರ್ ನಲ್ಲಿ ನಡೆದಿದೆ.
ಸೋಮವಾರ ಸಂಜೆ ಐದು ಗಂಟೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ವೇಳೆ ಬಾಲಕಿಯ ಪೋಷಕರು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬಿಸ್ಕಟ್ ನ ಆಸೆ ತೋರಿಸಿ ಮಗುವನ್ನು ಬಳಿಗೆ ಕರೆದ ಆರೋಪಿ ರಾಜು ತನ್ನ ಮನೆಗೆ ಕರೆದುಕೊಂಡು ಹೋಗಿ ಕೃತ್ಯವೆಸಗಿದ್ದಾನೆ.
ಅಷ್ಟೇ ಅಲ್ಲದೆ, ಹೀನ ಕೃತ್ಯ ಬೆಳಕಿಗೆ ಬಾರದಂತೆ ತಡೆಯಲು ಆಕೆಯನ್ನು ಕೊಲೆ ಮಾಡಿ ಗೋಣಿ ಚೀಲವೊಂದರಲ್ಲಿ ಕಟ್ಟಿ ಬಕೆಟ್ ನಿಂದ ಮುಚ್ಚಿದ್ದ. ಆದರೆ ಬಾಲಕಿಯ ಸಂಬಂಧಿಕರಿಗೆ ಈತನ ನಡತೆಯಲ್ಲಿ ಸಂಶಯ ಬಂದು ಪೊಲೀಸರಿಗೆ ದೂರು ನೀಢಿದ್ದರು. ಅದರಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.