Select Your Language

Notifications

webdunia
webdunia
webdunia
webdunia

ಪೊಲೀಸ್ ಎಂದು ಸುಳ್ಳು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ

ಪೊಲೀಸ್ ಎಂದು ಸುಳ್ಳು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ
ಹೈದರಾಬಾದ್ , ಬುಧವಾರ, 12 ಫೆಬ್ರವರಿ 2020 (06:53 IST)
ಹೈದರಾಬಾದ್ : ಪೊಲೀಸ್ ಎಂದು ಸುಳ್ಳು ಹೇಳಿ ಬಸ್ಸಿನಲ್ಲಿದ್ದ 37 ವರ್ಷದ ಮಹಿಳೆಯೊಬ್ಬಳನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ಜಹೀರಾಬಾದ್ ನಲ್ಲಿ ನಡೆದಿದೆ.


ಮಹಿಳೆಯೊಬ್ಬಳು ತನ್ನ ಮಗನ ಜೊತೆ ಬೀದರ್ ನಿಂದ ಜಹೀರಾಬಾದ್ ನಲ್ಲಿದ್ದ ಮನೆಗೆ ತೆರಳಲು ಬಸ್ ಹತ್ತಿದ್ದಾಳೆ. ಬಸ್ ಜಹೀರಾಬಾದ್ ಗೆ ಬರುತ್ತಿದ್ದಂತೆ ಬಸ್ ಹತ್ತಿದ್ದ ಮೂವರು ತಾವು ಪೊಲೀಸರೆಂದು ಸುಳ್ಳು ಹೇಳಿ ಮಹಿಳೆಯ ಬ್ಯಾಗಿನಲ್ಲಿ ನಿಷೇಧಿತ ವಸ್ತುಗಳು ಇದೆ ಪರಿಶೀಲನೆ ನಡೆಸಬೇಕೆಂದು ಹೇಳಿ ಮಹಿಳೆ ಮತ್ತು ಆಕೆಯ ಮಗನನ್ನು ಬಸ್ಸಿನಿಂದ ಕಳಗಿಳಿಸಿ ಕರೆದುಕೊಂಡು ಹೋಗಿ ಕಟ್ಟಡವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದಲ್ಲದೇ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.


ಆದರೂ ಮಹಿಳೆ ಈ ಬಗ್ಗೆ ಜಹೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರಿಗೆ ಸಿಹಿಸುದ್ದಿ, ಇಂದು ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ