Select Your Language

Notifications

webdunia
webdunia
webdunia
webdunia

ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್

ಗೃಹಿಣಿ

ಸಹೋದ್ಯೋಗಿಯಾಗಿದ್ದ ಗೃಹಿಣಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆ ಮೇಲೆ ಅವಳನ್ನು ಅಕ್ರಮ ಸಂಬಂಧ ಹೊಂದುವಂತೆ ಒತ್ತಡ ಹೇರಿದ ಘಟನೆ ನಡೆದಿದೆ.
 

22 ವರ್ಷದ ಗೃಹಿಣಿಯನ್ನು ಮನೆಗೆ ಕರೆದುಕೊಂಡು ಹೋಗಿ ಸಹೋದ್ಯೋಗಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಮತ್ತೊಬ್ಬನೂ ಕೂಡ ಲೈಂಗಿಕ ಕಿರುಕುಳ ನೀಡಿದ್ದಾನೆ.

ಆರೋಪಿ ಶಿವ ತನ್ನ ಸ್ನೇಹಿತ ರಾಜುವಿನ ಮನೆಗೆ ಗೃಹಿಣಿಯನ್ನು ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ನಡೆಸಿದ್ದಾನೆ.

ಆ ಬಳಿಕ ರಾಜು ಎಂಬಾತ ಸಂತ್ರಸ್ತೆಯ ಮನೆಗೆ ಹೋಗಿ ಅಕ್ರಮ ಸಂಬಂಧ ಹೊಂದಬೇಕೆಂದು ಒತ್ತಡ ಹಾಕಿದ್ದಾನೆ. ಇಲ್ಲದಿದ್ದರೆ ಅತ್ಯಾಚಾರದ ವಿಷಯ ಗಂಡನಿಗೆ ಹೇಳೋದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ಗೃಹಿಣಿ ಮನೆಯಲ್ಲಿ ಕೂಗಾಟ ನಡೆಸಿದಾಗ ಅಕ್ಕ ಪಕ್ಕದ ಜನರು ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅತ್ಯಾಚಾರ ನಡೆಸಿದವನೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೈದ್ರಾಬಾದ್ ನಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಗದ್ದುಗೆ ಗುದ್ದಾಟ – ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ