Publish Date: Wed, 23 Oct 2019 (17:08 IST)
Updated Date: Wed, 23 Oct 2019 (17:09 IST)
ಬೆಂಗಳೂರು: ನಟ ಪ್ರಕಾಶ್ ರಾಜ್ ವಿವಾದಿತ ಹೇಳಿಕೆಯೊಂದರಿಂದ ಈಗ ಸುದ್ದಿಯಾಗಿದ್ದಾರೆ. ದೆಹಲಿಯಲ್ಲಿ ನಡೆಯುವ ರಾಮ್ ಲೀಲಾ ಕಾರ್ಯಕ್ರಮದ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.
ರಾಮ್ ಲೀಲಾ ಕಾರ್ಯಕ್ರಮಕ್ಕೆ ರಾಮ ಸೀತೆ ಲಕ್ಷ್ಮಣ ವೇಷಧಾರಿಗಳನ್ನು ಮೇಕಪ್ ಮಾಡಿಸಿ ಮುಂಬೈನಿಂದ ಹೆಲಿಕಾಪ್ಟರ್ ನಲ್ಲಿ ಕರೆತರಲಾಗುತ್ತದೆ. ಇವರ ಹಿಂದೆ ಹಲವು ಅಧಿಕಾರಿಗಳು ಫೈಲು ಹಿಡಿದುಕೊಂಡು ಓಡಿ ಬರುತ್ತಾರೆ. ಇಂತಹದ್ದು ನಮ್ಮ ದೇಶದಲ್ಲಿ ನಡೆಯಬಾರದು ಎಂದು ಚರ್ಚಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಈ ವೇಳೆ ನಿರೂಪಕರು ನಿಮಗೆ ವಿರೋಧವಿದ್ದರೆ ಎಲ್ಲದಕ್ಕೂ ಆಕ್ಷೇಪ ವ್ಯಕ್ತಪಡಿಸಬೇಕು ಎಂದಲ್ಲ. ಎಲ್ಲರ ಭಾವನೆಗಳಿಗೂ ಬೆಲೆ ಕೊಡಬೇಕಾಗುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡುವಾಗ ಪ್ರಕಾಶ್ ರಾಜ್ ರಾಮ್ ಲೀಲಾ ಕಾರ್ಯಕ್ರಮವನ್ನು ಮಕ್ಕಳು ಪೋರ್ನ್ ಸೈಟ್ ನೋಡುವುದಕ್ಕೆ ಹೋಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಮ್ ಲೀಲಾ ಕಾರ್ಯಕ್ರಮಕ್ಕೂ ಪೋರ್ನ್ ಸೈಟ್ ವೀಕ್ಷಣೆಗೂ ಏನು ಸಂಬಂಧ ಎಂದು ಕೇಳಿದ್ದಕ್ಕೆ ಇದು ಅಲ್ಪಸಂಖ್ಯಾತರ ಮನಸ್ಸಿಗೆ ಭಯ ತರುವ ಘಟನೆ ಎಂದಿದ್ದಾರೆ. ಆದರೆ ಪ್ರಕಾಶ್ ರಾಜ್ ರ ಈ ಹೇಳಿಕೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದು, ರಾಮ ಲೀಲಾವನ್ನು ಪೋರ್ನ್ ಗೆ ಹೋಲಿಸಿದ್ದಕ್ಕೆ ಟೀಕಾ ಪ್ರಹಾರ ನಡೆಸಿದ್ದಾರೆ.