Select Your Language

Notifications

webdunia
webdunia
webdunia
webdunia

ಪುರೋಹಿತರಿಲ್ಲದೇ ನಡೆದ ಮದುವೆ! ವಧು ವರರು ಪ್ರಮಾಣ ಮಾಡಿದ್ದು ಯಾವುದರ ಮೇಲೆ ಗೊತ್ತಾ?!

ಪುರೋಹಿತರಿಲ್ಲದೇ ನಡೆದ ಮದುವೆ! ವಧು ವರರು ಪ್ರಮಾಣ ಮಾಡಿದ್ದು ಯಾವುದರ ಮೇಲೆ ಗೊತ್ತಾ?!
ಹೈದರಾಬಾದ್ , ಶುಕ್ರವಾರ, 18 ಅಕ್ಟೋಬರ್ 2019 (09:17 IST)
ಹೈದರಾಬಾದ್: ಅದೊಂದು ಮದುವೆ ಸಮಾರಂಭ. ಆದರೆ ಅಲ್ಲಿ ಪುರೋಹಿತರೂ ಇಲ್ಲ, ಮಂತ್ರ ಘೋಷಗಳೂ ಇರಲಿಲ್ಲ! ಅಷ್ಟೇ ಅಲ್ಲ, ಬಂದ ಅತಿಥಿಗಳ ಕೈಯಲ್ಲಿ ಗಿಫ್ಟ್ ಕೂಡಾ ಇರಲಿಲ್ಲ! ಇಂತಹದ್ದೊಂದು ಮದುವೆ ನಡೆದಿರುವುದು ಹೈದರಾಬಾದ್ ನಲ್ಲಿ.


ಇದು ಒಂದು ರೀತಿಯ ಹೊಸ ಮಾದರಿಯ ಮದುವೆ. ಇಲ್ಲಿ ಪುರೋಹಿತರಿರಲಿಲ್ಲ. ದಿಬ್ಬಣದಲ್ಲಿ ವರನ ಮನೆಗೆ ಬಂದ ವಧು ಬಳಿಕ ಯಾವುದೇ ನಿಶ್ಚಿತ ಮುಹೂರ್ತಗಳಿಲ್ಲದೇ ಸರಳವಾಗಿ ವಿವಾಹವಾದರು. ವಿವಾಹದ ಸಂದರ್ಭದಲ್ಲಿ ಮಂತ್ರದ ಬದಲು ಸಂವಿಧಾನದ ಮೇಲೆ ಆಣೆ ಇಟ್ಟು ಪ್ರಮಾಣ ಮಾಡಿದರು!

ಅಷ್ಟೇ ಅಲ್ಲ, ಅತಿಥಿಗಳು ಉಡುಗೊರೆ ನೀಡುವ ಬದಲು ತಮ್ಮ ಹಳ್ಳಿಗೆ ವಧು ವರರು ತಾವೇ ಲೈಬ್ರರಿಯೊಂದನ್ನು ಉಡುಗೊರೆ ನೀಡಿದರು. ಅದಲ್ಲದೆ, ಮದುವೆ ಮನೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಸಂಪೂರ್ಣವಾಗಿ ಪರಿಸರ ಸ್ನೇಹಿ ಮದುವೆ ಮಾಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ಖಾಸಗಿ ಶಾಲಾ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಬಿಎಂಪಿ