Select Your Language

Notifications

webdunia
webdunia
webdunia
webdunia

ಅಯೋಧ್ಯೆ ವಿಚಾರಣೆ ಮುಕ್ತಾಯ: ತೀರ್ಪು ಈ ದಿನ ಬರುವ ಸಾಧ್ಯತೆ

ಅಯೋಧ್ಯೆ ವಿಚಾರಣೆ ಮುಕ್ತಾಯ: ತೀರ್ಪು ಈ ದಿನ ಬರುವ ಸಾಧ್ಯತೆ
ನವದೆಹಲಿ , ಗುರುವಾರ, 17 ಅಕ್ಟೋಬರ್ 2019 (09:52 IST)
ನವದೆಹಲಿ: ಹಿಂದೂ ಮತ್ತು ಮುಸ್ಲಿಮರ ನಡುವೆ ಹಲವು ವರ್ಷಗಳಿಂದಲೂ ಸಂಘರ್ಷಕ್ಕೆ ಕಾರಣವಾಗಿರುವ ಅಯೋಧ್ಯೆ ರಾಮಜನ್ಮಭೂಮಿ ವಿವಾದಿತ ಪ್ರದೇಶದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಮುಕ್ತಾಯಗೊಂಡಿದೆ. ಇದೀಗ ತೀರ್ಪು ಹೊರಬರುವುದೊಂದೇ ಬಾಕಿ.


ಈ ಐತಿಹಾಸಿಕ ತೀರ್ಪಿಗೆ ಇಡೀ ದೇಶವೇ ಕಾಯುತ್ತಿದೆ. ಸುಪ್ರೀಂ ಕೋರ್ಟ್ ನೀಡಲಿರುವ ಆ ತೀರ್ಪಿಗೆ ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಆದರೆ ಅದು ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಆದರೆ ನ.17 ರಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಅದಕ್ಕೆ ಮೊದಲು ಅಂದರೆ ನ.15 ರಂದು ತೀರ್ಪು ಹೊರಬರುವ ನಿರೀಕ್ಷೆಯಿದೆ. ಆ ದಿನ ಇಡೀ ದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ನಲ್ಲಿ ಅಂಚೆ ಕಚೇರಿಯ ವಹಿವಾಟು ನಡೆಸಲು ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಅಂಚೆ ಇಲಾಖೆ