Publish Date: Wed, 16 Oct 2019 (10:12 IST)
Updated Date: Wed, 16 Oct 2019 (10:15 IST)
ನವದೆಹಲಿ: ರಸ್ತೆ ಎಂದರೆ ಹೇಗಿರಬೇಕು ಗೊತ್ತಾ? ಪಕ್ಕಾ ಹೇಮಮಾಲಿನಿ ಕೆನ್ನೆಯ ಹಾಗೆ ನುಣುಪಾಗಿ ಮಾಡ್ತೀವಿ! ಹೀಗಂತ ಮಧ‍್ಯಪ್ರದೇಶದ ಕಾಂಗ್ರೆಸ್ ನಾಯಕ, ಸಚಿವ ಪಿಸಿ ಶರ್ಮಾ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ.
ಮಧ್ಯಪ್ರದೇಶದ ಹಬೀಬ್ ಜಂಗ್ ನಲ್ಲಿ ರಸ್ತೆ ನಿರ್ಮಾಣದ ಸ್ಥಿತಿ ಗತಿಯ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು ಮಾಧ‍್ಯಮಗಳೊಂದಿಗೆ ಮಾತನಾಡುತ್ತಾ ಈಗಿನ ರಸ್ತೆ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ಕೆನ್ನೆಯ ಹಾಗಿದೆ. ಅದನ್ನು ಸಂಸದೆ ಹೇಮಮಾಲಿನಿ ಕೆನ್ನೆಯ ಹಾಗೆ ನುಣುಪಾಗಿ ಮಾಡ್ತೀವಿ ಎಂದಿದ್ದಾರೆ.
15 ದಿನಗಳೊಳಗೆ ಮುಖ್ಯಮಂತ್ರಿ ಕಮಲ್ ನಾಥ್ ಆದೇಶದ ಮೇರೆಗೆ ಈ ಗುಂಡಿ ಬಿದ್ದ ರಸ್ತೆಗಳನ್ನೆಲ್ಲಾ ಸರಿ ಮಾಡುತ್ತೇವೆ. ಸದ್ಯದಲ್ಲೇ ಹೇಮಮಾಲಿನಿ ಕೆನ್ನೆಯ ಹಾಗೆ ಆಗ್ತದೆ ಎಂದಿರುವುದು ಇದೀಗ ಆಕ್ಷೇಪಕ್ಕೆ ಗುರಿಯಾಗಿದೆ.