Select Your Language

Notifications

webdunia
webdunia
webdunia
webdunia

ಹುಣಸೂರು ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಹೆಚ್.ವಿಶ್ವನಾಥ್ ಮನವಿಗೆ ಕಾಂಗ್ರೆಸ್ ಹೇಳಿದ್ದೇನು?

ಹುಣಸೂರು ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಹೆಚ್.ವಿಶ್ವನಾಥ್ ಮನವಿಗೆ ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 15 ಅಕ್ಟೋಬರ್ 2019 (10:56 IST)
ಬೆಂಗಳೂರು : ಹುಣಸೂರು ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮನವಿಗೆ ಇದೀಗ ರಾಜ್ಯ ಕಾಂಗ್ರೆಸ್ ಪಕ್ಷ ಟಾಂಗ್ ನೀಡಿದೆ.




ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್, ಹೆಚ್.ವಿಶ್ವನಾಥ್ ಅವರ ಇಷ್ಟು ವರ್ಷದ ರಾಜಕಾರಣದಲ್ಲಿ ಹುಣಸೂರು ಜಿಲ್ಲೆಯಾಗಬೇಕು ಎನ್ನುವ ವಿಷಯವನ್ನು ಎಷ್ಟು ಬಾರಿ ಪ್ರಸ್ತಾಪಿಸಿದ್ದಾರೆ? ಈಗ ಡಿಸೆಂಬರ್ 5 ರಂದು ಉಪಚುನಾವಣೆ ಬಂದಿರುವ ಕಾರಣಕ್ಕೆ ಇಂತಹ ಗಿಮಿಕ್ ಮಾಡದರೆ ಜನರು ಒಪ್ಪುತ್ತಾರೆಯೇ? ಇಂತಹ ರಾಜಕೀಯ ಪ್ರೇರಿತ ಅಭಿಪ್ರಾಯವನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.


ಹಾಗೇ ವಿಜಯನಗರ ಜಿಲ್ಲೆ ಆಗಬೇಕು, ಹುಣಸೂರನ್ನು ಜಿಲ್ಲೆ ಮಾಡಬೇಕು ಎನ್ನುವಂತಹ ವಿಚಾರಗಳನ್ನು ಸ್ವಾರ್ಥ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳತ್ತಿರುವುದು ಸರಿಯಲ್ಲ.  ಜಿಲ್ಲೆಯ ಮುಖಂಡರು, ಸ್ಥಳೀಯರೊಂದಿಗೆ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಬೇಕು. ಬಳಿಕ ಅಗತ್ಯತೆ ಇದ್ದಲ್ಲಿ ಒಮ್ಮತದಲ್ಲಿ ವ್ಯವಸ್ಥಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದೆಹಲಿಯ ಹೈಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ