Publish Date: Wed, 16 Oct 2019 (11:05 IST)
Updated Date: Wed, 16 Oct 2019 (11:07 IST)
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಇದೀಗ ಇಡಿ ಇಲಾಖೆಯೂ ಬಂಧಿಸಿದೆ.
55 ದಿನಗಳಿಂದ ಸಿಬಿಐ ವಶದಲ್ಲಿರುವ ಚಿದಂಬರಂ ಇಂದು ಇಡಿ ವಿಚಾರಣೆಗೆ ಎದುರಿಸುತ್ತಿದ್ದಾರೆ. ತಿಹಾರ್ ಜೈಲ್ ಗೆ ತೆರಳಿದ ಇಡಿ ಅಧಿಕಾರಿಗಳು ಚಿದಂಬರಂಗೆ ಬಂಧನದ ಬೇಡಿ ತೊಡಿಸಿದ್ದಾರೆ.
ಈ ನಡುವೆ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಚಿದಂಬರಂ ಅವರನ್ನು ತಮ್ಮ ವಶಕ್ಕೊಪ್ಪಿಸಲು ಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ‍್ಯತೆಯಿದೆ. ಇದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.