Select Your Language

Notifications

webdunia
webdunia
webdunia
webdunia

ಡಿಕೆಶಿ ಅಕ್ರಮ ಹಣ ಪ್ರಕರಣ; ಕೆ ಎನ್​​ ರಾಜಣ್ಣಗೆ ಸಮನ್ಸ್ ನೀಡಿದ ಇಡಿ ಅಧಿಕಾರಿಗಳು

ಡಿಕೆಶಿ ಅಕ್ರಮ ಹಣ ಪ್ರಕರಣ; ಕೆ ಎನ್​​ ರಾಜಣ್ಣಗೆ ಸಮನ್ಸ್ ನೀಡಿದ ಇಡಿ ಅಧಿಕಾರಿಗಳು
ತುಮಕೂರು , ಬುಧವಾರ, 9 ಅಕ್ಟೋಬರ್ 2019 (11:05 IST)
ತುಮಕೂರು :ಡಿಕೆ ಶಿವಕುಮಾರ್ ಅವರ  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮಾಜಿ ಶಾಸಕ ಕೆ ಎನ್​​ ರಾಜಣ್ಣ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.




ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಕಾರ್ಖಾನೆ ಆರಂಭಿಸಲು ಅಪೆಕ್ಸ್ ಬ್ಯಾಂಕ್ ಅಡಿ ಬರುವ ಕೆಲ ಬ್ಯಾಂಕುಗಳ ಮೂಲಕ 300 ಕೋಟಿ ಸಾಲ ನೀಡಿದ್ದರು. ಆದಕಾರಣ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಗಳ ಅಧ್ಯಕ್ಷರಾಗಿದ್ದ ಹಿನ್ನಲೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.


ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗರಂ