Select Your Language

Notifications

webdunia
webdunia
webdunia
webdunia

ತಿಹಾರ್ ಜೈಲ್ ನಲ್ಲಿ ಡಿಕೆ ಶಿವಕುಮಾರ್ ಭೇಟಿ ಮಾಡಿದ ಸೋನಿಯಾ ಗಾಂಧಿ

ತಿಹಾರ್ ಜೈಲ್ ನಲ್ಲಿ ಡಿಕೆ ಶಿವಕುಮಾರ್ ಭೇಟಿ ಮಾಡಿದ ಸೋನಿಯಾ ಗಾಂಧಿ
ನವದೆಹಲಿ , ಬುಧವಾರ, 23 ಅಕ್ಟೋಬರ್ 2019 (10:15 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ಡಿಕೆ ಶಿವಕುಮಾರ್ ರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ಬೆಳಿಗ್ಗೆ ಭೇಟಿ ಮಾಡಿದರು.


ನಿನ್ನೆಯೇ ಸೋನಿಯಾ ತಿಹಾರ್ ಜೈಲ್ ಗೆ ತೆರಳಿ ಡಿಕೆಶಿ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ನಿನ್ನೆಯ ಭೇಟಿ ರದ್ದುಗೊಳಿಸಿದ್ದರು.

ಹೀಗಾಗಿ ಇಂದು ಬೆಳಿಗ್ಗೆ ಸೋನಿಯಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜತೆಗೆ ತಿಹಾರ್ ಜೈಲ್ ಗೆ ಆಗಮಿಸಿ ಡಿಕೆಶಿ ಹಾಗೂ ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರನ್ನೂ ಭೇಟಿ ಮಾಡಿ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಕಾಕ್ ಫಾಲ್ಸ್ ಬಳಿ ರಸ್ತೆಯಲ್ಲಿ ಗುಡ್ಡ ಕುಸಿತ; ರಸ್ತೆ ಸಂಚಾರ ಅಸ್ತವ್ಯಸ್ತ