ರಾಷ್ಟ್ರಪಿತನನ್ನು ರಾಷ್ಟ್ರದ ಮಗ ಎಂದು ಕರೆದು ವಿವಾದ ಸೃಷ್ಟಿಸಿದ ಸಾಧ್ವಿ ಪ್ರಗ್ಯಾ ಸಿಂಗ್

ಮಂಗಳವಾರ, 22 ಅಕ್ಟೋಬರ್ 2019 (09:19 IST)
ನವದೆಹಲಿ : ಈ ಹಿಂದೆ ಗಾಂಧಿ ಹಂತಕ ನಾಥೂರಾಮ್ ಗೂಡ್ಸೆಯನ್ನು ದೇಶಭಕ್ತ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಇದೀಗ ರಾಷ್ಟ್ರಪಿತ ಗಾಂಧೀಜಿಯವರನ್ನು ರಾಷ್ಟ್ರದ ಮಗ ಎಂದು ವಿವಾದಕ್ಕೆ ಕಾರಣರಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಧ್ವಿ ಪ್ರಗ್ಯಾ ಸಿಂಗ್ ಅವರು, ಗಾಂಧೀಜಿ ಈ ದೇಶದ ಮಗ, ಈ ಮಣ್ಣಿನ ಮಗ. ದೇಶಕ್ಕಾಗಿ ಅವರು ಮಾಡಿರುವ ಕೆಲಸ ಅವಿಸ್ಮರಣೀಯ. ಅವರ ದಾರಿ ನಮ್ಮೆಲ್ಲರಿಗೂ ದಾರಿದೀಪ, ಅವರ ಆದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡು ಹೋಗಬೇಕು ಎಂದು ಹೇಳಿದ್ದರು.


ಗಾಂಧೀಜಿ ಈ ದೇಶದ ಮಗ ಎಂದಿದ್ದಕ್ಕೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ವತಂತ್ರ್ಯ ಚಳುವಳಿಯ ನಾಯಕನಿಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಹಿನ್ನಲೆಯಲ್ಲಿ ಕೊನೆಗೆ ಸಾಧ್ವಿ ಪ್ರಗ್ಯಾ ಸಿಂಗ್ ತಮ್ಮ ಹೇಳಿಕೆಗಳಿಗೆ ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನರ್ಹ ಶಾಸಕರಿಗೆ ಗುಡ್ ನ್ಯೂಸ್; ಇಂದೇ ಅರ್ಜಿ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್