Publish Date: Fri, 18 Oct 2019 (09:55 IST)
Updated Date: Fri, 18 Oct 2019 (09:57 IST)
ಬೆಂಗಳೂರು: ಅಸ್ಸಾಂನಂತೇ ಬೆಂಗಳೂರಿನಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿ ಮಾಡಲು ಗೃಹಸಚಿವ ಅಮಿತ್ ಶಾ ಸಿದ್ಧತೆ ನಡೆಸುತ್ತಿದ್ದಾರೆ.
ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಸ್ಸಾಂನಲ್ಲಿ ಯಶಸ್ವಿಯಾಗಿ ಎನ್ ಆರ್ ಸಿ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಇದೀಗ ಬೆಂಗಳೂರಿನಲ್ಲೂ ಅಕ್ರಮ ವಲಸಿಗರನ್ನು ಹೊರ ಹಾಕಲು ಸಿದ್ಧತೆ ನಡೆಸಿದೆ.
ನೆಲಮಂಗಲ ಬಳಿ ಎನ್ ಆರ್ ಸಿಗೆ ಪೂರ್ವಭಾವಿಯಾಗಿ ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅಕ್ರಮ ವಲಸಿಗರನ್ನು ನಿಯಮ ಪ್ರಕಾರವೇ ಗುರುತಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಶಾ ಹೇಳಿದ್ದಾರೆ.