Publish Date: Mon, 21 Oct 2019 (09:12 IST)
Updated Date: Mon, 21 Oct 2019 (09:14 IST)
ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದಾಗ ಅದನ್ನು ಅನುಮಾನಿಸಿದ್ದ ಕೆಲವು ವಿಪಕ್ಷ ನಾಯಕರು ಟೀಕೆಗೊಳಗಾಗಿದ್ದರು. ಈಗ ನಿನ್ನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆ ಮೇಲೆ ದಾಳಿ ನಡೆಸಿದ ವಿಚಾರವನ್ನೂ ಕಾಂಗ್ರೆಸ್ ನಾಯಕರೊಬ್ಬರು ಅನುಮಾನದಿಂದ ನೋಡಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಖಿಲೇಶ್ ಸಿಂಗ್ ‘ಮೋದಿಯವರ ಅವಧಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಗಡಿಯಲ್ಲಿ ಸೈನಿಕರಿಂದ ಇಂತಹ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಚುನಾವಣೆ ಹತ್ತಿರ ಬಂದಾಗ ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತದೆ. ಇದು ಪ್ರಜೆಗಳನ್ನು ಮತ್ತೊಂದೆಡೆ ಸೆಳೆಯುವ ತಂತ್ರ’ ಎಂದು ಟೀಕಿಸಿದ್ದಾರೆ.
ಆ ಮೂಲಕ ಸೇನಾ ಕಾರ್ಯಾಚರಣೆಯನ್ನೇ ಅನುಮಾನದಿಂದ ನೋಡಿದ್ದಾರೆ. ಆದರೆ ಇನ್ನೊಬ್ಬ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಸೇನಾ ಕಾರ್ಯಾಚರಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.