Publish Date: Fri, 18 Oct 2019 (14:01 IST)
Updated Date: Fri, 18 Oct 2019 (14:03 IST)
ಕಾಂಗ್ರೆಸ್ ಕಾರ್ಯಕರ್ತರ ಮನವಿಯನ್ನು ಸ್ವೀಕಾರ ಮಾಡದೇ ಸಚಿವ ಬಿ.ಶ್ರೀರಾಮುಲು ತೆರಳಿದ ಘಟನೆ ನಡೆದಿದೆ.
ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನೆರೆ ಪರಿಹಾರ ವಿಚಾರದಲ್ಲಿ ವಿಳಂಬ ಆಗ್ತಿರೋದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನಾನಿರತರನ್ನ ಮನವೊಲಿಸುವಲ್ಲಿ ಸಚಿವ ಬಿ.ಶ್ರೀರಾಮುಲು ವಿಫಲವಾದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧನ ಮಾಡಿದರು. ಈ ವೇಳೆ ಪ್ರತಿಭಟನಾಕಾರರ ಮನವಿ ಸ್ವೀಕರಿಸದೇ ತೆರಳಿದರು ಶ್ರೀರಾಮುಲು.