Select Your Language

Notifications

webdunia
webdunia
webdunia
webdunia

ಗಂಗಾಸ್ನಾನ ಮಾಡಿದ್ರೆ ಪಾಪ, ಬಡತನ ಕಳೆಯಲ್ಲ ಅನ್ನುವ ಮಲ್ಲಿಕಾರ್ಜುನ ಖರ್ಗೆ ಹಜ್ ಯಾತ್ರೆ ಬಗ್ಗೆ ಕಾಮೆಂಟ್ ಮಾಡ್ತೀರಾ

Mallikarjun Kharge

Krishnaveni K

ನವದೆಹಲಿ , ಮಂಗಳವಾರ, 28 ಜನವರಿ 2025 (11:30 IST)
ನವದೆಹಲಿ: ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆದು ಹೋಗಲ್ಲ, ದೇಶದಲ್ಲಿ ಬಡತನ ನಿವಾರಣೆಯಾಗಲ್ಲ ಎನ್ನುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಧೈರ್ಯವಿದ್ದರೆ ಹಜ್ ಯಾತ್ರೆ ಬಗ್ಗೆ ಕಾಮೆಂಟ್ ಮಾಡಲಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡುವಾಗ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ ಅಮಿತ್ ಶಾರನ್ನು ಟೀಕಿಸಿದ್ದರು. ಈ ವೇಳೆ ಅಮಿತ್ ಶಾ-ಮೋದಿ ಎಷ್ಟೇ ಬಾರಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರೂ ಪಾಪ ಕಳೆಯಲ್ಲ. ಇವರು ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ದೇಶದಲ್ಲಿ ಬಡತನ ನಿವಾರಣೆಯಾಗುತ್ತಾ ಎಂದು ವ್ಯಂಗ್ಯ ಮಾಡಿದ್ದರು.

ಈ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದ ಅವರ ಕಾಮೆಂಟ್ ಗಳಿಗೆ ಕೇವಲ ಬಿಜೆಪಿ ಮಾತ್ರವಲ್ಲ, ಹಲವು ಹಿಂದೂಗಳಿಂದಲೂ ವಿರೋಧ ವ್ಯಕ್ತವಾಗಿದೆ. ಖರ್ಗೆಗೆ ಧೈರ್ಯವಿದ್ದರೆ ಮುಸಲ್ಮಾನ ಬಾಂಧವರ ಹಜ್ ಯಾತ್ರೆ ಬಗ್ಗೆ ಕಾಮೆಂಟ್ ಮಾಡಲಿ ಎಂದಿದ್ದಾರೆ.

ಖರ್ಗೆಯವರೇ ನಿಮಗೆ ಯಾವತ್ತೂ ಹಿಂದೂಗಳ ಆಚರಣೆಗಳೇ ಟಾರ್ಗೆಟ್ ಆಗುವುದು ಯಾಕೆ? ನೀವು ಯಾಕೆ ಹಜ್ ಯಾತ್ರೆ ಬಗ್ಗೆ ಕಾಮೆಂಟ್ ಮಾಡಲ್ಲ? ಹಜ್ ಯಾತ್ರೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದಾ? ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ನಾಸ್ತಿಕರಾಗುವುದು ತಪ್ಪಲ್ಲ, ಆದರೆ ಒಂದು ಧರ್ಮದ ಆಚರಣೆಯನ್ನು ಮಾತ್ರ ಟಾರ್ಗೆಟ್ ಮಾಡಿ ಮಾತನಾಡುವುದು ತಪ್ಪು ಎಂದಿದ್ದಾರೆ. ನಿಮ್ಮ ರಾಜಕೀಯ ಲಾಭಕ್ಕೆ ಹಿಂದೂ ಆಚರಣೆ, ಪವಿತ್ರ ಗಂಗೆಯನ್ನು ಎಳೆದು ತರುವುದು ಯಾಕೆ ಎಂದು ಹಲವರು ಕಿಡಿ ಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾ ಸ್ನಾನ ಮಾಡಿದ್ರೆ ಬಡತನ ನಿವಾರಣೆಯಾಗಲ್ಲ, ಪಾಪ ಕಳೆಯಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು