ವಡೋದರಾ : ಕಟ್ಟಡ ಕಾರ್ಮಿಕನೊಬ್ಬ 7 ವರ್ಷದ ಬಾಲಕಿಗೆ ಚಾಕೋಲೇಟ್ ನೀಡುವ ನೆಪದಲ್ಲಿ ಕರೆದೊಯ್ದು ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ವಡೋದರಾ ಜಿಲ್ಲೆಯ ಕರ್ಜನ್ ತಾಲೂಕಿನ ಹಳ್ಳಿಯಲ್ಲಿ ನಡೆದಿದೆ.
ಆರೋಪಿ ಕರ್ಜನ್ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದು, ಬಾಲಕಿಯ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕೆಗೆ ಚಾಕೋಲೇಟ್ ನೀಡುವುದಾಗಿ ತನ್ನ ಮನೆಗೆ ಕರೆದು ಆಕೆಯನ್ನು ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಕಿರುಚಾಡಿದಾಗ ಆರೋಪಿ ಪರಾರಿಯಾಗಿದ್ದಾನೆ.
ಬಾಲಕಿ ಅಳುತ್ತಿರುವುದನ್ನು ಕಂಡ ಗ್ರಾಮಸ್ಥರು ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರ ತಿಳಿದ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಅತ್ಯಾಚಾರ, ಅಪಹರಣ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.