Select Your Language

Notifications

webdunia
webdunia
webdunia
webdunia

ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಮಾನಭಂಗ ಎಸಗಿದ ನೆರೆಮನೆಯಾತ

ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಮಾನಭಂಗ ಎಸಗಿದ ನೆರೆಮನೆಯಾತ
ವಡೋದರಾ , ಶುಕ್ರವಾರ, 9 ಅಕ್ಟೋಬರ್ 2020 (09:15 IST)
ವಡೋದರಾ : 6, 9 ಮತ್ತು 12 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕಿಯರನ್ನು 44 ವರ್ಷದ ವ್ಯಕ್ತಿಯೊಬ್ಬ 1 ವರ್ಷದಿಂದ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.

ಆರೋಪಿ ಹಾಗೂ ಸಂತ್ರಸ್ತೆಯರು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದಿರುವಾಗ ಈತ ಮನೆಗೆ ನುಗ್ಗಿ ಇಂತಹ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆದರೆ ಬಾಲಕಿಯರು ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೆ ಮಹಿಳೆಯೊಬ್ಬರು ಇವರಿಗೆ  ‘ಗುಡ್ ಟಚ್ ಬ್ಯಾಡ್ ಟಚ್’ ಬಗ್ಗೆ ಪಾಠಮಾಡುತ್ತಿದ್ದಾಗ ಬಾಲಕಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ.

ತಕ್ಷಣ ಮಹಿಳೆ ಅವರ ಮನೆಯವರಿಗೆ ಈ ವಿಚಾರ ತಿಳಿಸಿ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ತಮ್ಮ ಜೊತೆ ಮಲಗಲು ಬನ್ನಿ’ ಎಂದು ಒತ್ತಾಯಿಸುತ್ತಿದ್ದ 6 ಮಂದಿ ಲೈಂಗಿಕ ಕಾರ್ಯಕರ್ತರು ಅರೆಸ್ಟ್