ಪಾಲನ್ ಪುರ : ಮಾತು ಬಾರದ 12 ವರ್ಷದ ಹುಡುಗಿಯ ಮೇಲೆ ಆಕೆಯ 25 ವರ್ಷದ ಸೋದರ ಸಂಬಂಧಿ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಗುಜರಾತ್ ನ ಬನಸ್ಕಂತ ಜಿಲ್ಲೆಯ ದೀಸಾ ಪಟ್ಟಣದಲ್ಲಿ ನಡೆದಿದೆ.
ಹುಡುಗಿಯ ಮೇಲೆ ಆರೋಪಿ ಮಾನಭಂಗ ಎಸಗಿದ ಬಳಿಕ ಆಕೆ ಆತನನ್ನು ತನ್ನ ಸೋದರ ಸಂಬಂಧಿ ಎಂಬುದನ್ನು ಗುರುತಿಸಿದ್ದಾಳೆ. ಇದರಿಂದ ಭಯಬೀತನಾದ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಸಂತ್ರಸ್ತೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಹಾಕಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.