Publish Date: Fri, 09 Oct 2020 (10:21 IST)
Updated Date: Fri, 09 Oct 2020 (10:23 IST)
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣದಲ್ಲಿ ಇಳಿಕೆ ಕಂಡುಬಂದಿದೆ. ಹಾಗಾದ್ರೆ ದೇಶದಲ್ಲಿ ಕಂಟ್ರೋಲ್ ಗೆ ಬರ್ತಿದೆಯಾ ಕೊರೊನಾ ಎಂಬ ಆಶಯ ವ್ಯಕ್ತವಾಗಿದೆ.
3 ವಾರದಿಂದ ಸೋಂಕು ಪ್ರಕರಣ ಇಳಿಯುತ್ತಿದ್ದು, ನಿತ್ಯ 94 ಸಾವಿರವಿದ್ದ ಕೊರೊನಾ ಕೇಸ್ ಈಗ 75ಸಾವಿರಕ್ಕೀಳಿದಿದೆ. 7 ತಿಂಗಳ ಬಳಿಕ ವೈರಸ್ ಅಬ್ಬರ ಇಳಿಮುಖವಾಗಿದೆ. ಮೊದಲ ಕೊರೊನಾ ಅಲೆ ಇಳಿಕೆ ಎಂದು ತಜ್ಞರು ತಿಳಿಸಿದ್ದಾರೆ.
ಆದರೆ ಹಾಗಂತ ನಿರ್ಲಕ್ಷಿಸುವ ಹಾಗಿಲ್ಲ. ಒಂದು ವೇಳೆ ನಿರ್ಲಕ್ಷಿಸಿದರೆ ಮತ್ತೆ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಮುಂದೆ ಹಬ್ಬಹರಿದಿನಗಳು ಬರುವ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸುವಂತೆ ತಜ್ಞರ ಸಲಹೆ ನೀಡಿದ್ದಾರೆ.