Publish Date: Wed, 14 Oct 2020 (08:13 IST)
Updated Date: Wed, 14 Oct 2020 (14:50 IST)
ಹೈದರಾಬಾದ್ : 15 ವರ್ಷದ ಹುಡುಗಿಯ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುವ ನೆಪದಲ್ಲಿ ನಕಲಿ ಸಾಧುವೊಬ್ಬ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿ ಮಾಡಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿಯನ್ನು ಗುಣಪಡಿಸಲು ಪೋಷಕರು ಈ ನಕಲಿ ಸಾಧುವನ್ನು ಶಕ್ತಿಶಾಲಿ ಮಾಂತ್ರಿಕನೆಂದು ನಂಬಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಧ್ಯಾನದ ಕೋಣೆಗೆ ಹುಡುಗಿಯನ್ನು ಕರೆದುಕೊಂಡು ಹೋಗಿ ಮಾದಕ ದ್ರವ್ಯ ನೀಡಿ ಆಕೆಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಹುಡುಗಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರ ಬಳಿಗೆ ಕರೆದೊಯ್ಯದಾಗ ಆಕೆ ಗರ್ಭಿಣಿ ಎಂಬುದಾಗಿ ತಿಳಿದುಬಂದಿದೆ. ಆಗ ಸ್ಥಳೀಯರೆಲ್ಲ ಸೇರಿ ಸಾಧು ಚೆನ್ನಾಗಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.