Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್ ಶಾ

webdunia
ಶನಿವಾರ, 9 ಅಕ್ಟೋಬರ್ 2021 (14:50 IST)
ಅಹ್ಮದಾಬಾದ್ : 2024ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ. ಮುಂದಿನ ಅವಧಿಗೂ ಖಂಡಿತ ಅವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹಾಗೇ, ಪ್ರಧಾನಿ ಮೋದಿಯವರನ್ನು ಬಿಟ್ಟು ಇನ್ಯಾವ ನಾಯಕನೂ ಹೀಗೆ 20 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ನಿರಂತರವಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲ ಎಂದೂ ಅವರು ತಿಳಿಸಿದ್ದಾರೆ.
ಗುಜರಾತ್ನ ಗಾಂಧಿನಗರದ ಪಾನ್ಸಾರ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ  20 ವರ್ಷಗಳ ಕಾಲ ಬ್ರೇಕ್ ಇಲ್ಲದೆ, ನಿರಂತರವಾಗಿ ಜನರ ಸೇವೆ ಮಾಡಿದ ಉದಾಹರಣೆಯಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಕಷ್ಟ. ಅಂಥದ್ದರಲ್ಲಿ ನರೇಂದ್ರ ಮೋದಿಯವರನ್ನು ಜನರು ಮೆಚ್ಚಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಇನ್ನು, ನರೇಂದ್ರ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2014ರಲ್ಲಿ ಪ್ರಧಾನಮಂತ್ರಿಯಾದರು. 2024ರಲ್ಲಿಯೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಅಮಿತ್ ಶಾ ಗುಜರಾತ್ನ ಗಾಂಧಿನಗರಕ್ಕೆ ಸರ್ಕಾರಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ ಮಾಡಲು ಆಗಮಿಸಿದ್ದರು. ಇದೇ ವೇಳೆ ಪಾನ್ಸಾರ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಉದ್ಘಾಟಿಸಿದ್ದಾರೆ. ಅಮಿತ್ ಶಾ ನಿನ್ನೆ ಅಲ್ಲಿಯೇ ಇದ್ದ, ಚಹಾ ಅಂಗಡಿಯಿಂದ ಮಣ್ಣಿನ ಕಪ್ನಲ್ಲಿ ಟೀ ಕುಡಿದಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಎಚ್‌ಡಿಕೆಗೆ ಗೋವಿಂದ ಕಾರಜೋಳ ಎಚ್ಚರಿಕೆ