Publish Date: Thu, 07 Oct 2021 (20:14 IST)
Updated Date: Thu, 07 Oct 2021 (20:16 IST)
ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವೇರುತ್ತಿದ್ದು ಹಾನಗಲ್ ಹಾಗೂ ಸಿಂದಗಿ ಬೈ ಎಲೆಕ್ಷನ್ ಅಕ್ಟೋಬರ್ 30 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.
ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನುಗೂಳಿ, ಹಾನಗಲ್ ಕ್ಷೇತ್ರದಿಂದ ಶ್ರಿನಿವಾಸ್ ಮಾನೆ ನಾಮಪತ್ರ ಸಲ್ಲಿಸಿದ್ರು.
ಇನ್ನು ಜೆಡಿಎಸ್ನಿಂದ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ನಾಜೀಯಾ ಶಕೀಲ, ಹಾನಗಲ್ ಕ್ಷೇತ್ರದಿಂದ ನಿಯಾಜ್ ಶೇಕ್ ನಾಮಪತ್ರ ಸಲ್ಲಿಸಿದ್ರು.