Publish Date: Thu, 07 Oct 2021 (11:52 IST)
Updated Date: Thu, 07 Oct 2021 (11:54 IST)
ಮೈಸೂರು : ಸ್ವಚ್ಛ, ದಕ್ಷ, ಜನಪರ ಆಡಳಿತ ನೀಡಲು ಬದ್ಧರಾಗಿದ್ದು, ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದಸರಾ ಮಹೋತ್ಸವ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ಎನ್ನುವ ವಿಚಾರವನ್ನು ಉದ್ಘಾಟಕರು ಕೂಡ ತಿಳಿಸಿದರು. ಖಂಡಿತವಾಗಿ ವಿಶ್ವದಲ್ಲಿ ಬೇರೆ ಬೇರೆ ಹಬ್ಬಗಳನ್ನು ಆಚರಣೆ ಮಾಡಲು ಟೂರಿಸಂ ಸರ್ಕಿಟ್ ಮಾಡಿ ಪ್ರಚಾರ ಕೊಟ್ಟು, ಜನರನ್ನು ಆಕರ್ಷಣೆ ಮಾಡುತ್ತಾರೆ. ಅದೇ ಮಾದರಿಯಲ್ಲಿ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲಾಗುವುದು. ಸಂಬಂಧಿಸಿದ ಸಚಿವರುಗಳು ಜೊತೆ ಚರ್ಚಿಸಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.