Publish Date: Mon, 04 Oct 2021 (19:54 IST)
Updated Date: Mon, 04 Oct 2021 (19:58 IST)
ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೇರವೆರಸಿದ್ರು. ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ, ಸಂಸದ ಡಿ.ಕೆ ಸುರೇಶ್ ಸೇರಿದಂತೆ ಬೆಂಗಳೂರಿನ ಸಚಿವರು ಭಾಗಿಯಾಗಿದ್ರು. ಕಾರ್ಯಕ್ರಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳ ಜೊತೆ ಜೊತೆಗೆ ಪೊಲಿಟಿಕಲ್ ಟಾಕ್ ವಾರ್ ಕೂಡ ನಡೆಯಿತು. ವೇದಿಕೆಯ ಮೇಲೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ನನ್ನ ಸಹಕಾರವಿಲ್ಲದೆ ಅಭಿವೃದ್ದಿ ಕಾರ್ಯಗಳು ಆಗುವುದಿಲ್ಲ. ನಿಮ್ಮಗಳಿಂದ ನಾನು ರಾಜಕಾರಣ ಕಲಿಯಬೇಕಿಲ್ಲ.ಮುಂದೆ ಚುನಾವಣೆಯಿದೆ ಜನ ನಿರ್ಧಾರ ಮಾಡ್ತಾರೆ ಎಂದು ಸಿಎಂ ಹಾಗೂ ಸಚಿವರಿಗೆ ಡಿಚ್ಚಿ ಕೊಟ್ಟರು. ಇದಾದ ಮೇಲೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ನಮ್ಮ ಗ್ರೇಡ್ ಗಳನ್ನು ಬದಿಗಿಟ್ಟು ಕೆಲಸ ಮಾಡೋಣ, 59 ತಿಂಗಳು ಅಭಿವೃದ್ದಿ ಕೆಲಸಗಳನ್ನು ಒಟ್ಟಿಗೆ ಮಾಡೋಣ, ಒಂದು ತಿಂಗಳು ರಾಜಕಾರಣ ಮಾಡೋಣ, ಚುನಾವಣೆಯಲ್ಲಿ ಜನರೇ ನಿರ್ಧಾರ ಮಾಡ್ತಾರೆ. ಘೋಡಾ ಹೈ, ಮೈದಾನ್ ಹೈ ಎಂದು ಡಿ.ಕೆ ಸುರೇಶ್ ತೀರುಗೇಟು ನೀಡಿದ್ರು.