Select Your Language

Notifications

webdunia
webdunia
webdunia
webdunia

ಪುತ್ರಿಯರ ಮೇಲೆ ಅತ್ಯಾಚಾರವೆಸಗಲು ಬೆಂಬಲ ನೀಡಿದ ತಾಯಿ : ಆರೋಪಿ ಅರೆಸ್ಟ್

Rape
manipur , ಬುಧವಾರ, 15 ನವೆಂಬರ್ 2023 (12:14 IST)
ಆರೋಪಿ ಮತ್ತು ಆತನ 16 ವರ್ಷದ ಮಗ ನೆರೆಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಮೇಲೆ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯವೆಸಗಿದ ಹೇಯ ಘಟನೆ ಮಣಿಪುರ ರಾಜ್ಯದ ಜಿಲ್ಲೆಯೊಂದರಲ್ಲಿ ವರದಿಯಾಗಿದೆ. 
 
ತಂದೆ ಮತ್ತು ಮಗ ಸೇರಿ ಅಪ್ರಾಪ್ತ ಅವಳಿ ಸಹೋದರಿಯರ ಮೇಲೆ ಒಂದು ವರ್ಷಗಳ ಕಾಲ ಅತ್ಯಾಚಾರವೆಸಗಿದ ವಿಲಕ್ಷಣ, ಹೇಯ ಘಟನೆ ನಡೆದಿದೆ. ಮತ್ತೂ ಘೋರ ಸಂಗತಿ ಎಂದರೆ ನೆರೆಮನೆಯವರ ಈ ಕೀಚಕ ಕೃತ್ಯಕ್ಕೆ  ಆ ಬಾಲಕಿಯರಿಬ್ಬರ ತಾಯಿ ಸಹ ಬೆಂಬಲ ನೀಡಿರುವುದು. ಪೀಡಿತರಿಬ್ಬರು ನೇಪಾಳ ಮೂಲದವರಾಗಿದ್ದು, ಅವರ ತಂದೆ  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿಯೇ ನೆಲೆಯೂರಿದ್ದಾರೆ. 
 
ಅವರ ದೌರ್ಜನ್ಯದಿಂದ ರೋಸಿ ಹೋದ ಬಾಲಕಿಯರಲ್ಲಿ ಒಬ್ಬಳು ತಮ್ಮ ದುರವಸ್ಥೆಯ ಬಗ್ಗೆ ಶಿಕ್ಷಕಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆ ಈ ವಿಷಯವನ್ನು ಮಕ್ಕಳ ಹಕ್ಕಿಗಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗೆ ತಿಳಿಸಿದ್ದಾಳೆ. ಎನ್‌ಜಿಓ ಈ ವಿಷಯವನ್ನು ಪೊಲೀಸ್ ಉಪ ಆಯುಕ್ತಅವರಿಗೆ ತಿಳಿಸಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ವಾಯುಮಾಲಿನ್ಯ: ಸೋನಿಯಾ ಗಾಂಧಿಗೆ ಜೈಪುರಕ್ಕೆ ಶಿಫ್ಟ್ ಆಗಲು ವೈದ್ಯರ ಸಲಹೆ