Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಢೋಂಗಿ ಸ್ವಾಮಿ

ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಢೋಂಗಿ ಸ್ವಾಮಿ
pune , ಬುಧವಾರ, 15 ನವೆಂಬರ್ 2023 (11:15 IST)
ಪೊಲೀಸರು ಹೇಳುವ ಪ್ರಕಾರ, ಮಹಿಳೆ ಆಶ್ರಮದ ಮುಖ್ಯಸ್ಥನನ್ನು ಭೇಟಿಯಾಗಲು ಬಂದಿದ್ದಳು. ಆ ಸಮಯದಲ್ಲಿ ಕೆಲವೊಂದು ಸಾಮಗ್ರಿ ತರುವ ನೆಪದಲ್ಲಿ ಮಹಿಳೆಯ ಗಂಡನನ್ನು ಹತ್ತಿರದ ಮಾರುಕಟ್ಟೆಗೆ ಕಳುಹಿಸಿದ ಆಶ್ರಮದ ಮುಖ್ಯಸ್ಥ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
 
ವಿವಾಹಿತ ಮಹಿಳೆಯ ಮೇಲೆ ಆಶ್ರಮದ ಮುಖ್ಯಸ್ಥನೇ ಅತ್ಯಾಚಾರವೆಸಗಿದ ಹೇಯ ಘಟನೆ ನಡೆದಿದೆ. ಮಹಿಳೆ ತನ್ನ ಪತಿ ಜತೆ  ಆಶ್ರಮಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ತಾನೆಸಗಿದ ಕೃತ್ಯವನ್ನು ಯಾರ ಬಳಿಯಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತ ಬೆದರಿಕೆ ಸಹ ಒಡ್ಡಿದ್ದ. ಹೀಗಾಗಿ ಪುಣೆ ತಲುಪಿದ ಬಳಿಕ ಪತಿಯ ಬಳಿ ಆಕೆ ನಡೆದ ಸಂಗತಿಯನ್ನು ಹೇಳಿಕೊಂಡಿದ್ದಾಳೆ. 
 
ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನೆರೆಮನೆಯ ಅಂಕಲ್‌ನಿಂದಲೇ ಗ್ಯಾಂಗ್‌ರೇಪ್: ಆರೋಪಿಗಳ ಬಂಧನ