Publish Date: Tue, 15 Feb 2022 (09:30 IST)
Updated Date: Tue, 15 Feb 2022 (09:46 IST)
ಮುಂಬೈ: ಮಗಳು ಹಾಕಿದ ವ್ಯಾಟ್ಸಪ್ ಸ್ಟೇಟಸ್ ನಿಂದಾಗಿ ತಾಯಿಯೊಬ್ಬಳು ಕೊಲೆಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
20 ವರ್ಷದ ಮಗಳು ವ್ಯಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ್ದಳು. ಇದು ತನ್ನನ್ನು ಉದ್ದೇಶಿಸಿ ಹಾಕಿದ್ದು ಎಂದು ಆಕೆಯ ಸ್ನೇಹಿತೆ ಮನೆಯಲ್ಲಿ ದೂರಿದ್ದಳು. ಇದರಿಂದ ಮನನೊಂದ ಸ್ನೇಹಿತೆ ಮನೆಯವರು ಯುವತಿಯ ಮನೆಗೆ ಬಂದು ಜಗಳವಾಡಿದ್ದಾರೆ.
ಈ ನಡುವೆ ಸ್ನೇಹಿತೆಯ ಕುಟುಂಬಸ್ಥರು ಯುವತಿಯ ತಾಯಿಗೆ ಥಳಿಸಿದ್ದು ಪರಿಣಾಮ ಆಕೆ ಮೃತಪಟ್ಟಿದ್ದಾರೆ. ಇದೀಗ ಯುವತಿ ಮತ್ತು ಕುಟುಂಬಸ್ಥರು ಸ್ನೇಹಿತೆಯ ಮನೆಯವರ ವಿರುದ್ಧ ದೂರು ನೀಡಿದ್ದು ಕುಟುಂಬಸ್ಥರನ್ನು ಬಂಧಿಸಲಾಗಿದೆ.