Select Your Language

Notifications

webdunia
webdunia
webdunia
webdunia

ಮದುವೆಗೆ ಬಂದವ ಚಿನ್ನವನ್ನೂ ಕೊಂಡು ಹೋದ!

ಕಳ್ಳತನ
ಗ್ವಾಲಿಯರ್ , ಸೋಮವಾರ, 14 ಫೆಬ್ರವರಿ 2022 (10:00 IST)
ಗ್ವಾಲಿಯರ್: ಮದುವೆಗೆ ಬಂದವರು ಮಧುಮಕ್ಕಳನ್ನು ಹರಸಿ ಉಂಡು ಹೋಗೋದು ಸಾಮಾನ್ಯ. ಆದರೆ ಈ ಚಾಲಾಕಿ ಕಳ್ಳ ಮದುಮಕ್ಕಳಿಗೆ ಹಾರೈಸಲು ಬಂದ ಚಿನ್ನದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾನೆ.

ಮದುವೆ ಮನೆಯಲ್ಲಿ ಫೋಟೋ ತೆಗೆಸಿಕೊಳ‍್ಳುವವನಂತೆ ಬಂದಿದ್ದ ಕಳ್ಳ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಹೊತ್ತುಕೊಂಡು ಅಮಾಯಕನಂತೆ ಮದುವೆ ಮನೆಯಿಂದ ಜಾಗ ಖಾಲಿ ಮಾಡಿದ್ದಾನೆ.

ಫೋಟೋ ತೆಗೆಸಿಕೊಳ್ಳಲು ಮಧು ಮಕ್ಕಳ ಬಳಿ ಬಂದಿದ್ದ ವ್ಯಕ್ತಿ ಮೆತ್ತಗೆ ವಧುವಿನ ಕುರ್ಚಿಯ ಹಿಂಬದಿಗೆ ಹೋಗಿ ಬ್ಯಾಗ್ ಎತ್ತಿಕೊಂಡು ಹೋಗಿದ್ದಾನೆ. ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳಿದ್ದ ಬ್ಯಾಗ್ ನಾಪತ್ತೆಯಾದ ಬಗ್ಗೆ ತಿಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕದ್ದ ಬೈಕ್ ನಲ್ಲಿ ಬಂದು ದರೋಡೆ