Select Your Language

Notifications

webdunia
webdunia
webdunia
webdunia

ಬಾಡಿ ಮಸಾಜ್ ಮಾಡಿಸಿಕೊಳ್ಳಲೆಂದೇ ಕಳ್ಳತನಕ್ಕಿಳಿದಿದ್ದ ಖದೀಮರು

ಕಳ್ಳತನ
ಬೆಂಗಳೂರು , ಸೋಮವಾರ, 14 ಫೆಬ್ರವರಿ 2022 (09:10 IST)
ಬೆಂಗಳೂರು: ಕಳ್ಳತನಕ್ಕೆ ಯಾವುದೆಲ್ಲಾ ವಿಚಿತ್ರ ಕಾರಣಗಳಿರುತ್ತವೆ ನೋಡಿ. ಇಲ್ಲಿಬ್ಬರು ಕಳ್ಳರಿಗೆ ಬಾಡಿ ಮಸಾಜ್ ಮಾಡಿಸಿಕೊಳ್ಳುವ ಚಟ. ಇದಕ್ಕೆ ಹಣ ಬೇಕಾದಾಗ ಇಬ್ಬರೂ ಕಳ್ಳತನ ಮಾಡುತ್ತಿದ್ದರು. ಇದೀಗ ಇಬ್ಬರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

46 ಮತ್ತು 32 ವರ್ಷದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರಿಗೆ ಬಾಡಿ ಮಸಾಜ್ ಮಾಡಿಸಿಕೊಳ್ಳುವ ಚಟವಿತ್ತು. ಜೊತೆಗೆ ಮಸಾಜ್ ಮಾಡಿದವರಿಗೆ ದೊಡ್ಡ ಮೊತ್ತದ ಟಿಪ್ಸ್ ನೀಡುತ್ತಿದ್ದರು. ಇದಕ್ಕಾಗಿ ಹಣ ಬೇಕಾಗಿತ್ತಲ್ವಾ?

ಅದೇ ಕಾರಣಕ್ಕೆ ಇಬ್ಬರೂ ಬೀಗ ಹಾಕಿದ್ದ ಮನೆ ಬೀಗ ಮುರಿದು ಕಳ್ಳತನ ಮಾಡಿ ಹಣ ಮಾಡಿ ತಮ್ಮ ಚಟಕ್ಕೆ ಬಳಸಿಕೊಳ್ಳುತ್ತಿದ್ದರು. ಇದೀಗ ಇಬ್ಬರೂ ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ