Publish Date: Sun, 13 Feb 2022 (09:49 IST)
Updated Date: Sun, 13 Feb 2022 (09:51 IST)
ಪಾಟ್ನಾ: ಪತ್ನಿಯನ್ನು ಬಿಟ್ಟು ಮತ್ತೊಬ್ಬ ಯುವತಿಯನ್ನು ಮದುವೆಯಾಗಲೆತ್ನಿಸಿದ ಯುವಕನಿಗೆ ಆತನ ಕುಟುಂಬಸ್ಥರೇ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಆರೋಪಿ ಯುವಕನ ಒಪ್ಪಿಗೆ ಮೇರೆಗೇ ಕುಟುಂಬಸ್ಥರು ಮದುವೆ ಮಾಡಿದ್ದರು. ಆದರೆ ಬೇರೊಂದು ಊರಿನಲ್ಲಿ ನೌಕರಿ ಮಾಡುತ್ತಿದ್ದ ಆರೋಪಿ ಪತ್ನಿಗೆ ಹಣ ಕಳುಹಿಸುವುದನ್ನೂ ನಿಲ್ಲಿಸಿದ್ದ. ಅಲ್ಲದೆ ಮತ್ತೊಬ್ಬ ಯುವತಿ ಜೊತೆ ಮದುವೆಯಾಗಲು ಹೊರಟಿದ್ದ.
ಈ ವಿಚಾರ ತಿಳಿದ ಪತ್ನಿ ಪತಿಯ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಳು. ಒಪ್ಪಿಗೆಯಿದ್ದು ವಿವಾಹವಾಗಿ ಈಗ ಪತ್ನಿಗೇ ಮೋಸ ಮಾಡಲೆತ್ನಿಸಿದ್ದಕ್ಕೆ ಮನೆ ಮಗ ಎಂಬುದನ್ನೂ ನೋಡದೆ ಕುಟುಂಬಸ್ಥರು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Krishnaveni K
Publish Date: Sun, 13 Feb 2022 (09:49 IST)
Updated Date: Sun, 13 Feb 2022 (09:51 IST)