Select Your Language

Notifications

webdunia
webdunia
webdunia
webdunia

ಇಎಂಐ ಕಟ್ಟಲು ಕಾಟ: ಯುವಕ ಆತ್ಮಹತ್ಯೆ

ಇಎಂಐ ಕಟ್ಟಲು ಕಾಟ: ಯುವಕ ಆತ್ಮಹತ್ಯೆ
ಬೆಂಗಳೂರು , ಶನಿವಾರ, 12 ಫೆಬ್ರವರಿ 2022 (10:44 IST)
ಬೆಂಗಳೂರು: ಮನೆ ಕಟ್ಟಲು ಪಡೆದಿದ್ದ ಸಾಲದ ಇಎಂಐ ಕಟ್ಟಲು ಬ್ಯಾಂಕ್ ಸಿಬ್ಬಂದಿ ಸತಾಯಿಸುತ್ತಿದ್ದರಿಂದ ಬೇಸತ್ತ 33 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲ ಪಾವತಿಸಲು ಬ್ಯಾಂಕ್ ಸಿಬ್ಬಂದಿ ಒತ್ತಡ ಹೇರುತ್ತಿದ್ದರು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಸಂತ್ರಸ್ತ ಮನನೊಂದಿದ್ದ.

ಪತ್ನಿ ತವರು ಮನೆಗೆ ಹೋಗಿದ್ದಾಗ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲ ಪಾವತಿ ಮತ್ತು ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಕೆಲವೇ ಕ್ಷಣದಲ್ಲಿ ವಧು ಪ್ರಿಯಕರನ ಜೊತೆ ಎಸ್ಕೇಪ್