Publish Date: Sat, 12 Feb 2022 (10:09 IST)
Updated Date: Sat, 12 Feb 2022 (10:11 IST)
ಭೋಪಾಲ್: ಮದುವೆಯಾದ ಕೆಲವೇ ಕ್ಷಣಗಳಲ್ಲಿ ವಧು ಪ್ರಿಯಕರನ ಜೊತೆ ನಾಪತ್ತೆಯಾದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಮದುವೆಯಾಗಿ ಪತಿ ಮನೆಗೆ ಮರಳುವಾಗ ದಾರಿ ಮಧ್ಯೆ ಶೌಚಾಲಯಕ್ಕೆ ಹೋಗಬೇಕೆಂದು ವಧು ನಾಟಕವಾಡಿದ್ದಾಳೆ. ಆದರೆ ಶೌಚಾಲಯಕ್ಕೆ ಹೋದವಳು ಎಷ್ಟು ಹೊತ್ತಾದರೂ ವಾಪಸ್ ಬರಲಿಲ್ಲ. ಇದರಿಂದ ವರನ ಮನೆಯವರಿಗೆ ಆತಂಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಚಾರಣೆ ನಡೆಸಿದಾಗ ವಧು ಪ್ರಿಯಕರನ ಜೊತೆ ಓಡಿ ಹೋಗಿರುವುದು ಗೊತ್ತಾಗಿದೆ. ಇದೀಗ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.