Publish Date: Sun, 13 Feb 2022 (09:40 IST)
Updated Date: Sun, 13 Feb 2022 (09:43 IST)
ಛತ್ತೀಸ್ ಘಡ: ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪ್ರಿಯಕರನ ಜೊತೆ ವಧು ಓಡಿ ಹೋದ ಘಟನೆ ಬಗ್ಗೆ ಸುದ್ದಿ ಓದಿರುತ್ತೀರಿ. ಆ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ವರನ ಮನೆಯವರ ದೂರಿನ ಅನ್ವಯ ಪೊಲೀಸರು ಓಡಿ ಹೋದ ವಧು ಮತ್ತು ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದರು. ಇಬ್ಬರನ್ನೂ ಪತ್ತೆ ಮಾಡಿದ ಪೊಲೀಸರು ಪ್ರಿಯಕರನನ್ನು ಮರೆತು ಗಂಡನ ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ.
ಪೊಲೀಸರ ಮಾತು ಕೇಳದ ಯುವತಿ ತನಗೆ ಪ್ರಿಯಕರನೇ ಬೇಕು ಎಂದು ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿದ್ದಾಳೆ. ಈ ವೇಳೆ ವರನ ಮನೆಯವರು ಪ್ರಿಯಕರನನ್ನು ಸುತ್ತುವರೆದಾಗ ರೌದ್ರಾವತಾರ ಪ್ರದರ್ಶಿಸಿ ಆತನನ್ನು ರಕ್ಷಿಸಿದ್ದಾಳೆ. ಇದರಿಂದ ಬೇಸತ್ತ ವರನ ಮನೆಯವರು ಯುವತಿ ಹಾಗೂ ಪ್ರಿಯಕರನನ್ನು ಬಿಟ್ಟು ವಾಪಸಾಗಿದ್ದಾರೆ.