Publish Date: Mon, 14 Feb 2022 (09:40 IST)
Updated Date: Mon, 14 Feb 2022 (09:52 IST)
ಬೆಂಗಳೂರು: ಕದ್ದ ಬೈಕ್ ನಲ್ಲಿ ಬಂದು ಖದೀಮರು ಹೋಟೆಲ್ ಒಂದರಲ್ಲಿ ದರೋಡೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಜಯನಗರದ ಹೋಟೆಲ್ ನಲ್ಲಿ ಕಳ್ಳತನ ನಡೆದಿದೆ. ಈ ಮೊದಲೇ ಕದ್ದಿದ್ದ ಬೈಕ್ ನಲ್ಲಿ ಮಧ್ಯರಾತ್ರಿ ವೇಳೆ ಹೋಟೆಲ್ ಗೆ ಬಂದ ಖದೀಮರಿಬ್ಬರು ಕಳ್ಳತನ ಮಾಡುತ್ತಾರೆ.
ಶಟರ್ ಬೀಗ ಒಡೆದು ಫ್ಲ್ಯಾಶ್ ಲೈಟ್ ಬೆಳಕಿನಲ್ಲಿ ಹೋಟೆಲ್ ಒಳಗೆ ಡ್ರಾಯರ್ ನಲ್ಲಿದ್ದ ಸುಮಾರು ಎರಡೂವರೆ ಲಕ್ಷ ರೂಪಾಯಿಗಳನ್ನು ಎಗರಿಸಿ ಪರಾರಿಯಾಗುತ್ತಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.