Select Your Language

Notifications

webdunia
webdunia
webdunia
webdunia

ಹಿಂದು ಜಾಗರಣ ವೇದಿಕೆ ಕಾರ್ಯಾಚರಣೆ: ಗೋಮಾಂಸ ಸಮೇತ ಆರೋಪಿ ಬಂಧನ

ಹಿಂದು ಜಾಗರಣ ವೇದಿಕೆ ಕಾರ್ಯಾಚರಣೆ: ಗೋಮಾಂಸ ಸಮೇತ ಆರೋಪಿ ಬಂಧನ
bangalore , ಸೋಮವಾರ, 14 ಫೆಬ್ರವರಿ 2022 (21:03 IST)
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕುಂಬೂರು ಎ.ಜೆ.ಎಸ್ಟೇಟ್ ನಲ್ಲಿ  ಭಾನುವಾರ ರಾತ್ರಿ 8:30 ರ ಸುಮಾರಿಗೆ  ಎ.ಜೆ ಎಸ್ಟೇಟ್ ನ  ಕೆಲವರ ಸಹಕಾರದೊಂದಿಗೆ ಅಸ್ಸಾಂ ಮೂಲದ ಕಾರ್ಮಿಕರು ಗೋವನ್ನು ಹತ್ಯೆಗೈದು ಮಾಂಸ ಮಾಡಿ ಅಕ್ರಮವಾಗಿ  ಸಾಗಾಟ ಮಾಡುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಹಿಂದು ಜಾಗರಣ ವೇದಿಕೆ ಹಾಗೂ ಸ್ಥಳೀಯ ಹಿಂದು ಕಾರ್ಯಕರ್ತರ ತಂಡ ಗೋಮಾಂಸ ಸಮೇತ ಅಸ್ಸಾಂ ಮೂಲದ ವ್ಯಕ್ತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುತ್ತಾರೆ. 
 ಅಸ್ಸಾಂ ಮೂಲದ ವ್ಯಕ್ತಿ ರಜಾಕ್ ಎಂಬಾತನನ್ನು ಕಾರ್ಯಕರ್ತರು ಪೋಲೀಸರಿಗೊಪ್ಪಿಸಿದ್ದು ಬಂಧಿತ ಆರೋಪಿ ರಜಾಕ್  ಜೊತೆಯಲ್ಲಿದ್ದ ಇನ್ನೂ ಐದಾರು ಕಾರ್ಮಿಕರು ಕತ್ತಲಲ್ಲಿ ಓಡಿ ತಪ್ಪಿಸಿಕೊಂಡಿರುತ್ತಾರೆ. ತಕ್ಷಣವೇ ಪೋಲೀಸರಿಗೆ ಮಾಹಿತಿ ನೀಡಲಾಗಿದ್ದು ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.  
ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ, ಗೋಮಾಂಸ  ಮಾರಾಟ , ಅಕ್ರಮ ಗೋಸಾಗಾಟದಂತಹ ಪ್ರಕರಣಗಳು ನಡೆಯುತ್ತಲೇ ಇದ್ದು ಪೋಲೀಸ್ ಇಲಾಖೆ  ಅವುಗಳನ್ನು ಮಟ್ಟ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆಯೆಂದು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು  ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಕಾರ್ಯಾಚರಣೆ ಸಂದರ್ಭ ಹಿಂದು ಜಾಗರಣ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ  ಮಾದಪುರ ಸುನಿಲ್ ,ಕಾರ್ಯದರ್ಶಿ ವಿನು,ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಉಮೇಶ್ , ಹೋಸತೋಟ ಪ್ರಭ,ಯೋಗಾನಂದ ಕುಂಬೂರು,ಗಿರೀಶ್ , ದೀಪು...ಸೇರಿದಂತೆ  ಸ್ಥಳೀಯ ಕಾರ್ಯಕರ್ತರು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ಪುತ್ರ ಬಿಕರಿ: ಖರೀದಿಯಾಗದೆ ಉಳಿದ ಸುರೇಶ್ ರೈನಾ