Select Your Language

Notifications

webdunia
webdunia
webdunia
webdunia

ಕಾಲೇಜುಗಳಲ್ಲಿ ‘ಹಿಜಾಬ್-ಕೇಸರಿ ಶಾಲು ಸಂಘರ್ಷ

ಕಾಲೇಜುಗಳಲ್ಲಿ ‘ಹಿಜಾಬ್-ಕೇಸರಿ ಶಾಲು ಸಂಘರ್ಷ
bangalore , ಸೋಮವಾರ, 14 ಫೆಬ್ರವರಿ 2022 (20:41 IST)
ಬೆಂಗಳೂರು: ಹಿಜಾಬ್  ಅನುಮತಿ ಕೋರಿ ಹೈಕೋರ್ಟ್ ಗೆ  ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದ್ದಂತ ತ್ರಿಸದಸ್ಯ ಪೂರ್ಣಪೀಠವು, ಇಂದಿಗೆ ಅರ್ಜಿಯ ವಿಚಾರಣೆ ಮುಂದೂಡಿಕೆ ಮಾಡಿತ್ತು. ಇಂದು ಮತ್ತೆ ಹೈಕೋರ್ಟ್ ನಲ್ಲಿ ಹಿಜಾಬ್ ಧರಿಸೋ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಮುಂದುವರೆಯಲಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಕಾಲೇಜಿನಲ್ಲಿ ಆರಂಭಗೊಂಡಂತ ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಘರ್ಷ, ಈಗ ರಾಜ್ಯದೆಲ್ಲೆಡೆ ಹರಡಿದೆ. ಈ ಸಂದರ್ಭದಲ್ಲಿಯೇ ಹಿಜಾಬ್ ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನ್ನು, ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ಒಳಗೊಂಡಂತ ತ್ರಿಸದಸ್ಯ ನ್ಯಾಯಪೀಠವು ವಿಚಾರಣೆ ಕೈಗೆತ್ತಿಕೊಂಡಿತ್ತು.
ಹೈಕೋರ್ಟ್ ಪೂರ್ಣಪೀಠವು, ಮಧ್ಯಂತರ ಆದೇಶದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಹೊರತು ಯಾವುದೇ ಧಾರ್ಮಿಕ ಗುರುತಿನ ಉಡುಪು ಧರಿಸುವಂತಿಲ್ಲ ಎಂಬುದಾಗಿಯೂ ಆದೇಶಿಸಿ, ಇಂದಿಗೆ ಅರ್ಜಿಯ ವಿಚಾರಣೆ ಮುಂದೂಡಿತ್ತು. ಈ ಅರ್ಜಿಯ ವಿಚಾರಣೆ  ಮತ್ತೆ ಪುನರಾರಂಭಗೊಳ್ಳಲಿದೆ. ಹೈಕೋರ್ಟ್ ನ್ಯಾಯಪೀಠ ಇಂದು ವಾದ-ಪ್ರತಿವಾದದ ಬಳಿಕ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಎಲ್ಲರ ಚಿತ್ತ, ಈಗ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?