Publish Date: Sun, 13 Feb 2022 (08:10 IST)
Updated Date: Sun, 13 Feb 2022 (01:49 IST)
ಬೆಳಗಾವಿ : ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಭೀತಿ ಮೂಡದಂತೆ ಶಾಲಾ, ಕಾಲೇಜುಗಳು ಪ್ರಾರಂಭ ಮಾಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕೇಸ್ ಕೋರ್ಟ್ನಲ್ಲಿದೆ. ಪ್ರತಿದಿನವೂ ವಿಚಾರ ನಡೆಯುತ್ತಿದೆ. ಈಗಾಗಲೇ ಕೋರ್ಟ್ ಮಧ್ಯಂತರ ಆದೇಶವನ್ನು ಕೊಟ್ಟಿದೆ. ಹೀಗಾಗಿ ನಮ್ಮ ಮೊದಲ ಆದ್ಯತೆ ರಾಜ್ಯದಲ್ಲಿ ಶಾಂತಿ ನೆಲೆಸಬೇಕು.
ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಭೀತಿ ಮೂಡದಂತೆ ಶಾಲಾ ಕಾಲೇಜುಗಳು ಪ್ರಾರಂಭ ಮಾಡುವುದು ಸರ್ಕಾರದ ಮೊದಲ ಆದ್ಯತೆ ಎಂದರು.