Select Your Language

Notifications

webdunia
webdunia
webdunia
webdunia

ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ : ಖುಷ್ಬೂ

ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ : ಖುಷ್ಬೂ
ಚೆನ್ನೈ , ಗುರುವಾರ, 10 ಫೆಬ್ರವರಿ 2022 (08:26 IST)
ಚೆನ್ನೈ : ಶಾಲಾ-ಕಾಲೇಜುಗಳು ಧರ್ಮ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ.

ಅಲ್ಲಿ ನೀವು ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಹಿಜಬ್-ಕೇಸರಿ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ನಟಿ ಖುಷ್ಬೂ ಕಿಡಿಕಾರಿದ್ದಾರೆ.

ಶಿಕ್ಷಣಕ್ಕೆ ಧರ್ಮವಿಲ್ಲ ಅದು ಸಮಾನತೆಯ ಆಲಯ. ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸುತ್ತಿದ್ದೆ. ಆಗ ಎಲ್ಲರಿಗೂ ರೂಲ್ಸ್ ಒಂದೇ ಆಗಿತ್ತು. ಸಮಾನತೆ ಇತ್ತು. ಆದರೆ ಇದೀಗ ಶಾಲಾ-ಕಾಲೇಜಿನಲ್ಲಿ ಧರ್ಮದ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. 

ನಾನು ಶಾಲೆಗೆ ಹೋಗುವಾಗ ಯಾರೂ ಕೂಡ ಯಾವುದನ್ನು ಧರಿಸಕೊಂಡು ಬರುವುದನ್ನು ನೋಡಿಲ್ಲ. ಆದರೆ ಸಮವಸ್ತ್ರ ಮಾತ್ರ ಕಡ್ಡಾಯವಾಗಿತ್ತು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಆದರೆ ಇದೀಗ ಈ ಗೊಂದಲ ಯಾಕೆ?.

ಸರಸ್ವತಿ ಜ್ಞಾನದ ಸಂಕೇತ ಕೆಲ ಕಿಡಿಗೇಡಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಬರುವುದು ತಪ್ಪು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೊದಲ ಹಂತದ ಮತದಾನ