ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ - ಕಾಲೇಜು ಬಂದ್ ಮಾಡಲಾಗುವುದು ಎಂದು ಸಚಿವ ಎನ್.
ನಾಗೇಶ್ ತಿಳಿಸಿದ್ದಾರೆ.
ಶಾಲಾ-ಕಾಲೇಜು ಬಂದ್ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ - ಕಾಲೇಜು ಬಂದ್ ಮಾಡಲಾಗುವುದು.
ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟ ಮಾಡುತ್ತೇವೆ.
ಬೆಂಗಳೂರು ನಗರದಲ್ಲಿ ಪಾಸಿಟಿವಿ ದರ ಹೆಚ್ಚಿದೆ, ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಯಾ ಜಿಲ್ಲೆಯ ಪಾಸಿಟಿವಿ ದರದ ಆಧಾರದ ಮೇಲೆ ಜಿಲ್ಲಾಧಿಕಾರಿಗಳು, ಶಾಲಾ-ಕಾಲೇಜು ಬಂದ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ.
ಆಯಾ ಜಿಲ್ಲೆಯಲ್ಲಿ ತಾಲೂಕುವಾರು ಪಾಸಿಟಿವಿಟಿ ದರ ನೋಡಿಕೊಂಡು ಬಂದ್ ಮಾಡಲಾಗುತ್ತೆ. ಇಡೀ ಜಿಲ್ಲೆ, ರಾಜ್ಯವ್ಯಾಪಿ ಶಾಲಾಕಾಲೇಜು ಬಂದ್ ಮಾಡೋದಿಲ್ಲ.
ತಾಲೂಕು ಮಟ್ಟದಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದರೆ ಜಿಲ್ಲಾಧಿಕಾರಿಗಳು ಶಾಲೆ ಬಂದ್ ಕುರಿತು ನಿರ್ಧಾರ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ.