2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.
 
 			
 
 			
					
			        							
								
																	
	ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.
	ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?
	ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.
	ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.
	ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.
	ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.
	2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?