Select Your Language

Notifications

webdunia
webdunia
webdunia
webdunia

ಆರು ವರ್ಷದ ಮಗುವನ್ನು ಕಾಮುಕನಿಂದ ರಕ್ಷಿಸಿದ ಮಂಗಗಳು: ಆ ಭಜರಂಗಿಯೇ ಧರೆಗೆ ಬಂದ

Monkey

Krishnaveni K

ಲಕ್ನೋ , ಸೋಮವಾರ, 23 ಸೆಪ್ಟಂಬರ್ 2024 (13:00 IST)
ಲಕ್ನೋ: ಆಂಜನೇಯ ಸ್ವಾಮಿ ಕಲಿಯುಗದಲ್ಲೂ ಜೀವಂತವಾಗಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಅದು ಈ ಮಗುವಿನ ವಿಚಾರದಲ್ಲಿ ನಿಜವಾಗಿದೆ. ಆರು ವರ್ಷದ ಮಗುವನ್ನು ಕಾಮುಕನಿಂದ ಮಂಗಗಳೇ ರಕ್ಷಿಸಿವೆ. ಈ ಘಟನೆಯ ವಿವರ ಇಲ್ಲಿದೆ.

ಮನೆಯ ಬಳಿ ಆಡುತ್ತಿದ್ದ ಮಗುವನ್ನು ಕರೆದೊಯ್ದು ರೇಪ್ ಮಾಡಲೆತ್ನಿಸಿದ ವ್ಯಕ್ತಿಯ ಮೇಲೆ ಗುಂಪಾಗಿ ಬಂದು ಮಂಗಗಳು ದಾಳಿ ಮಾಡಿ ಬಾಲಕಿಯನ್ನು ರಕ್ಷಿಸಿವೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಇದೀಗ ಆ ಆಂಜನೇಯನೇ ಮಗುವನ್ನು ರಕ್ಷಿಸಿದೆ ಎಂದು ಕುಟುಂಬದವರು ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

ಬಾಲಕಿಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ನನ್ನ ಮಗಳು ಮನೆಯ ಬಳಿ ಆಡುತ್ತಿದ್ದಳು. ಆಗ ಆರೋಪಿ ಆಕೆಯನ್ನು ಉಪಾಯವಾಗಿ ಯಾರೂ ಇಲ್ಲದ ಮನೆಗೆ ಕರೆದೊಯ್ದಿದ್ದ. ಅಲ್ಲಿ ಮಗುವಿನ ಬಟ್ಟೆ ಬಿಚ್ಚಿಸಿದ್ದ. ಬಳಿಕ ಅತ್ಯಾಚಾರಕ್ಕೆ ಯತ್ನಿಸಿದಾಗ ಅಲ್ಲೇ ಇದ್ದ ಮಂಗಗಳ ಗುಂಪು ಆತನ ಮೇಲೆ ದಾಳಿ ಮಾಡಿವೆ. ಮಂಗಗಳ ಕಾಟ ತಡೆಯಲಾಗದೇ ಆತ ಓಡಿ ಹೋಗಿದ್ದಾನೆ’ ಎಂದಿದ್ದಾರೆ.

ಇದೀಗ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೋಸ್ಕೋ ಕಾಯಿದೆಯಡಿ ದೂರು ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಮಂಗನ ರೂಪದಲ್ಲಿ ದೇವರೇ ಬಂದು ಮಗುವನ್ನು ರಕ್ಷಿಸಿರಬಹುದು ಎನ್ನಬಹುದು. ಮಗುವಿಗೆ ಆತ ಕೊಲೆ ಬೆದರಿಕೆಯನ್ನೂ ಹಾಕಿದ್ದನಂತೆ. ಇದೀಗ ಮಂಗಗಳಿಂದಾಗಿ ಮಗು ಸುರಕ್ಷಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ಲಡ್ಡು ವಿವಾದದ ಬಳಿಕ ಹಿಂದೂ ದೇವಾಲಯಗಳ ಬಗ್ಗೆ ಸ್ವಾಮೀಜಿಗಳಿಂದ ಬೇಡಿಕೆ: ಇದಕ್ಕೆ ಹಿಂದೂಗಳಿಂದಲೂ ಸಹಮತ