Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಮಹಿಳೆ ಕೊಲೆ ಪ್ರಕರಣ: ಆರೋಪಿ ಪತ್ತೆಗೆ 8 ತಂಡಗಳ ರಚನೆ

Bangalore Crime Case

Sampriya

ಬೆಂಗಳೂರು , ಭಾನುವಾರ, 22 ಸೆಪ್ಟಂಬರ್ 2024 (11:46 IST)
ಬೆಂಗಳೂರು: ಸಿಲಿಕಾನ್ ಸಿಟಿಯ ವೈಯಾಲಿಕಾವಲ್‌ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಯ ಪತ್ತೆಗಾಗಿ 8ತಂಡಗಳನ್ನು ರಚಿಸಿ, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಗಳನ್ನು ನೋಡಲು ತಾಯಿ ಮೃತ ಮಹಾಲಕ್ಷ್ಮೀ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತಾಯಿಯ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿದ್ದಾರೆ.

ಈ ನಡುವೆ ತಾಯಿ ಮೃತ ಮಹಾಲಕ್ಷ್ಮೀ ಗಂಡನಿಗೆ ಫೋನ್ ಮಾಡಿ ಮಾಹಿತಿ ನೀಡಿ ಕರೆಸಿದ್ದಾರೆ. ಈ ವೇಳೆ ಮೃತಳ ಗಂಡ ಮತ್ತು ಆಕೆಯ ನಾಲ್ಕು ವರ್ಷದ ಮಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ಹಿಂದೆ ನೆಲಮಂಗಲದ ಬಳಿ ಪತಿ ಜೊತೆ ಮಹಾಲಕ್ಷ್ಮೀ ವಾಸವಿದ್ದರು. ಆದರೆ ಗಂಡನ ಜತೆ ವೈಮನಸ್ಸಿನಿಂದಾಗಿ ಗಂಡ ಹೆಂಡತಿ 6 ತಿಂಗಳಿನಿಂದ ಬೇರೆ ಬೇರೆಯಾಗಿ ವಾಸವಿದ್ದಾರೆ. ಇನ್ನೂ ಮೃತ ಮಹಾಲಕ್ಷ್ಮೀ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಪ್ರತಿ ನಿತ್ಯ ಬೈಕ್‌ನಲ್ಲಿ ಓರ್ವ ಮನೆಗೆ ಪಿಕಪ್‌, ಡ್ರಾಪ್‌ ಮಾಡುತ್ತಿರುವುದು ತಿಳಿದುಬಂದಿದ್ದು, ಆತನ ಮೇಲೆಯೇ ಕೊಲೆ ಶಂಕೆ ವ್ಯಕ್ತವಾಗಿದೆ.  ಕೊಲೆಯಾಗಿರುವ ಮಹಾಲಕ್ಷ್ಮೀಗೆ ಒಂದು ಮಗು ಸಹ ಇತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದು ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​