Select Your Language

Notifications

webdunia
webdunia
webdunia
webdunia

ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ ಮೇಲೆ ಹಲ್ಲೆಗೆ ಯತ್ನ, ಬೆಂಗಳೂರಿನಲ್ಲಿ ಯಾಕೆ ಹೀಗೇ ಎಂದಾ ನೆಟ್ಟಿಗರು

Auto Driver

Sampriya

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (19:09 IST)
Photo Courtesy X
ಬೆಂಗಳೂರು: ಆಟೋ ಬುಕ್‌ ಮಾಡಿ, ಕ್ಯಾನ್ಸಲ್ ಮಾಡಿ ಬೇರೆ ಆಟೋ ಹತ್ತಿದ್ದಕ್ಕೆ ಕೋಪಗೊಂಡು ಚಾಲಕ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.

ಈ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.2ರಂದು ನಡೆದಿದೆ.

ಯುವತಿ ಹಾಗೂ ಆಕೆಯ ಸ್ನೇಹಿತೆ ಇಬ್ಬರೂ ಓಲಾ ಆಟೋವನ್ನು ಬುಕ್ ಮಾಡಿದ್ದಾರೆ. ಅದು ತಡವಾಗಿ ಬಂದಿದ್ದಕ್ಕೆ ಯುವತಿ ಬೇರೆ ಆಟೋವನ್ನು ಹತ್ತಿದ್ದಾಳೆ. ಈ ವೇಳೆ ಬುಕ್ ಮಾಡಿದ ಆಟೋ ಕೂಡಾ ಬಂದಿದೆ.

ಯುವತಿ ಬೇರೆ ಆಟೋ ಹತ್ತಿದ್ದಕ್ಕೆ ಕೋಪಗೊಂಡ ರಿಕ್ಷಾ ಚಾಲಕ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನೆಲ್ಲ ಯುವತಿ ತನ್ನ ಮೊಬೈಲ್‌ನಲ್ಲಿ ಸೆರೆ ಮಾಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಗೂ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಭೂ ಪುರಾಣಗಳ ದೂರು ನೀಡಿದ್ರೆ ರಾಜ್ಯಪಾಲರ ಕಪಾಟು ಸಾಕಾಗಲ್ಲ