Select Your Language

Notifications

webdunia
webdunia
webdunia
webdunia

ಗಣೇಶನ ಪ್ರಸಾದಕ್ಕೆ ರೂಲ್ಸ್‌ ಹಾಕಿದ್ದು, ಬೀದಿ ಬೀದಿಯಲ್ಲಿ ಪ್ರಾಣಿ ಬಲಿ ನೀಡುವವರಿಗೂ ಅನ್ವಯವಾಗುತ್ತಾ

Ganesha Festival 2024

Sampriya

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (17:30 IST)
Photo Courtesy X
ಬೆಂಗಳೂರು:  ಗಣೇಶೋತ್ಸವ ಪ್ರಸಾದಕ್ಕೆ FSSAI ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ  ಪಡೆಯಬೇಕೆಂಬ ನಿಯಮಾವಳಿ ಅವೈಜ್ಞಾನಿಕ ಹಾಗೂ ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನ. ಅಷ್ಟಕ್ಕೂ, ರಾಜ್ಯದ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದಲ್ಲಿ ಇದೆ ನಿಯಮವನ್ನು ಹೋಟೆಲ್, ಡಾಬಾ ಹಾಗೂ ಹಲಾಲ್ ಮಾಂಸವನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೂ ಅನ್ವಯ ಆಗಬೇಕಾಗಿತ್ತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಬಸನಗೌಡ ಪಾಟೀಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.  

ಪೋಸ್ಟ್‌ನಲ್ಲಿ ಹೀಗಿದೆ: ಗಣೇಶೋತ್ಸವ ಪ್ರಸಾದಕ್ಕೆ FSSAI ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ  ಪಡೆಯಬೇಕೆಂಬ ನಿಯಮಾವಳಿ ಅವೈಜ್ಞಾನಿಕ ಹಾಗೂ ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನ. ಅಷ್ಟಕ್ಕೂ, ರಾಜ್ಯದ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದಲ್ಲಿ ಇದೆ ನಿಯಮವನ್ನು ಹೋಟೆಲ್, ಡಾಬಾ ಹಾಗೂ ಹಲಾಲ್ ಮಾಂಸವನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೂ ಅನ್ವಯ ಆಗಬೇಕಾಗಿತ್ತು.

ಇನ್ನೇನು, ಹಬ್ಬಕ್ಕೆ ಎರಡು ದಿನಗಳು ಇರಬೇಕಾದರೆ ಪಾಲಿಸಲಾಗದ ನಿಯಮವನ್ನು ಹೇರುವುದು ಸರ್ಕಾರದ ಹಿಂದೂ ವಿರೋಧಿ ನೀತಿ ತೋರಿಸುತ್ತದೆ.  ಅನ್ಯಕೋಮಿನ ಹಬ್ಬಗಳಲ್ಲಿ ಬೀದಿ ಬೀದಿಯಲ್ಲಿ ಪ್ರಾಣಿಬಲಿ ನೀಡಿ ಅದರಿಂದ ಮಾಂಸ ಮಾರಾಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ ?

ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ತಯಾರು ಮಾಡಬೇಕಾದರೆ FSSAI ಪರವಾನಗಿ ಪಡೆದವರಿಂದ ಸರ್ಕಾರ ಮಾಡಿಸುತ್ತಿದೆಯಾ ? ಬೀದಿ, ಬೀದಿಗಳಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಉಪಯೋಗಿಸಿ ತಿಂಡಿ/ಊಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ ?

ಶುಚಿತ್ವದ ಪಾಲನೆ ಸರಿ, ಆದರೆ ಹಬ್ಬಕ್ಕೆ ಎರಡು ದಿನ ಇರಬೇಕಾದರೆ FSSAI ಅನುಮೋದಿತ ವ್ಯಕ್ತಿ/ಸಂಸ್ಥೆಗಳಿಂದ ಪ್ರಸಾದ ತಯಾರು ಮಾಡಬೇಕೆಂಬ ಫರ್ಮಾನು ಹೊರಡಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ