Select Your Language

Notifications

webdunia
webdunia
webdunia
webdunia

ಪತ್ನಿ ನೀಡಿದ ವರದಿ ಇಲ್ಲಿ ನಡೆಯಲ್ಲ, ಸರ್ಜಿಕಲ್ ಚೇರ್‌ಗೆ ಬೇಡಿಕೆಯಿಟ್ಟ ದರ್ಶನ್‌ಗೆ ಆರೋಗ್ಯ ತಪಾಸಣೆ

Darshan Thoogudeep

Sampriya

ಬೆಂಗಳೂರು , ಭಾನುವಾರ, 1 ಸೆಪ್ಟಂಬರ್ 2024 (16:24 IST)
Photo Courtesy X
ಬೆಂಗಳೂರು: ಜೈಲಿನಲ್ಲಿ ಸರ್ಜಿಕಲ್ ಚೇರ್‌ ನೀಡುವಂತೆ ಮನವಿ ಮಾಡಿದ್ದ ನಟ ದರ್ಶನ್‌ಗೆ ವಿಮ್ಸ್ ಆಸ್ಪತ್ರೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಡಿಐಜಿ ಶೇಷ ಅವರು ಜೈಲಿಗೆ ಭೇಟಿ ಕೊಟ್ಟ ವೇಳೇ, ಬೆನ್ನು ನೋವಿನಿಂದಾಗಿ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರಲು ಕಷ್ಟವಾಗುತ್ತಿದೆ. ಸರ್ಜಿಕಲ್ ಚೇರ್ ನೀಡುವಂತೆ ದರ್ಶನ್ ಮನವಿ ಮಾಡಿದ್ದರು.

ಈ ಸಂಬಂಧ ಡಿಐಜಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿ, ವರದಿಯ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಶನಿವಾರ ಪತಿಯನ್ನು ಭೇಟಿ ಮಾಡಲು ಬಂದಿದ್ದ ವಿಜಯಲಕ್ಷ್ಮೀ ಅವರು ದರ್ಶನ್ ಬೆನ್ನು ನೋವಿನ ಸಂಬಂಧ ವರದಿಯನ್ನು ನೀಡಿದ್ದಾರೆ. ಆದರೆ ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಜೈಲಿನ ವರದಿಯೇ ಮುಖ್ಯ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಅದರಂತೆ ದರ್ಶನ್‌ಗೆ  ಆರೋಗ್ಯ ತಪಾಸಣೆ ಮಾಡುವಂತೆ ಹೇಳಿದ್ದಾರೆ.  ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳದ ಆರೋಪ ನಿರಾಕರಿಸಿದ ನಟ ಜಯಸೂರ್ಯ: ಕಾನೂನು ಹೋರಾಟದ ಎಚ್ಚರಿಕೆ