Select Your Language

Notifications

webdunia
webdunia
webdunia
webdunia

ಪವಿತ್ರ ಗೌಡ ಜಾಮೀನು ಅರ್ಜಿ ವಜಾ, ಸದ್ಯ ದರ್ಶನ್ ಗೆಳತಿಗೆ ಜೈಲೇ ಗತಿ

Pavitra Gowda

Sampriya

ಬೆಂಗಳೂರು , ಶನಿವಾರ, 31 ಆಗಸ್ಟ್ 2024 (17:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಜೈಶಂಕರ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಜಾಮೀನು ಅರ್ಜಿ ವಜಾ ಮಾಡಿ  ಸಿಸಿಎಚ್‌ 57ನೇ ನ್ಯಾಯಾಲಯ ಈ ಆದೇಶವನ್ನು ಪ್ರಕಟ ಮಾಡಿದೆ.  ಇದಿರಂದ ದರ್ಶನ್ ಗೆಳತಿ ಪವಿತ್ರ ಗೌಡಗೇ ಸದ್ಯ ಜೈಲೇ ಗತಿಯಾಗಿದೆ.

ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಎ7 ಆರೋಪಿ ಅನುಕುಮಾರ್ ಅವರ ಜಾಮೀನು ಕೂಡಾ  ಅರ್ಜಿ ವಜಾ ಆಗಿದೆ.

ರೇಣುಕಾಸ್ವಾಮಿ ಕೇಸ್​​ನಲ್ಲಿ ನಟಿ ಪವಿತ್ರ ಗೌಡ ಜಾಮೀನು‌ ಕೋರಿ ಅರ್ಜಿ‌ ಸಲ್ಲಿಸಿದ್ದರು. ಆ ಅರ್ಜಿಯ
ವಿಚಾರಣೆ ಈಗಾಗಲೇ ನಡೆದಿತ್ತು. ಸಿಸಿಎಚ್ 57 ರಲ್ಲಿ ಜಾಮೀನು‌ ಅರ್ಜಿ ವಿಚಾರಣೆ ಮಾಡಿದ್ದು ಪವಿತ್ರಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಮೊದಲು ವಾದ ಮಂಡಿಸಿದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪಾತ್ರವನ್ನು ವಿವರಿಸಿದರು. ಅದಲ್ಲದೆ ಮಹಿಳೆ ಎನ್ನುವ  ಕಾರಣಕ್ಕೆ ಜಾಮೀನು ನೀಡಬಾರದು ಎಂದಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರ ಜೊತೆ ಒಳಗೆ ನಡೆದ ಮಾತುಕತೆ ನಿಮ್ಮ ಬಳಿ ಹೇಳಕ್ಕಾಗಲ್ಲ: ಡಿಸಿಎಂ ಡಿಕೆ ಶಿವಕುಮಾರ್