Publish Date: Fri, 30 Aug 2024 (15:27 IST)
Updated Date: Fri, 30 Aug 2024 (15:32 IST)
ಬೆಂಗಳೂರು: ನಟ ದರ್ಶನ್ ಕೊಲೆ ಪ್ರಕರಣದಡಿಯಲ್ಲಿ ಜೈಲು ಸೇರಿದ್ರು, ಅವರ ಅಭಿಮಾನಿಗಳು ಮಾತ್ರ ಅವರ ಕರಿಯ ಸಿನಿಮಾವನ್ನು ರೀ ರಿಲೀಸ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ದರ್ಶನ್ ಅವರ ವೃತ್ತಿ ಬದುಕಿನಲ್ಲಿ ಕರಿಯ ಹೊಸ ಮೈಲಿಗಲ್ಲನ್ನು ತಂದುಕೊಟ್ಟಿತು. ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಕರಿಯ 2003ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಬರೆದಿತ್ತು. ಇದೀಗ ಅದೇ ಸಿನಿಮಾವನ್ನು ಬೆಂಗಳೂರಿನ ಕೆಲ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿದ್ದು, ದರ್ಶನ್ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.
ದರ್ಶನ್ ಅವರ ಸಿಒನಿಮಾ ರೀ ರಿಲೀಸ್ ಹಿನ್ನೆಲೆ ಕಟೌಭಟ್‌ಗಳನ್ನು ಹಾಕಿ, ಥಿಯೇಟರ್‌ಗಳನ್ನು ಹೂವಿನಿಂದ ಅಲಂಕರಿಸಿ ಹಬ್ಬದಂದೆ ಸಂಭ್ರಮಿಸಿದ್ದಾರೆ. ದರ್ಶನ್ ಅವರು ಕೊಲೆ ಪ್ರಕರಣದಡಿಯಲ್ಲಿ ವಿಚಾರಣಾಧೀನ ಕೈದಿಯಾಗಿ ಇದೀಗ ಬಳ್ಳಾರಿ ಜೈಲಿನಲ್ಲಿದ್ದಾರೆ.
ಈ ವೇಳೆ ಮಾಧ್ಯಮಗಳಲ್ಲಿ ಮಾತನಾಡಿದ ಅವರ ಅಭಿಮಾನಿಗಳು, ನಮ್ ಬಾಸ್ ಇಂದಲ್ಲ, ನಾಳೆ ಹೊರ ಬರುತ್ತಾರೆ. ಅವರ ಬರುವಿಕೆಗಾಗಿ ಕಾಯುತ್ತಿರುತ್ತೇವೆ. ಅವರು ಎಲ್ಲಿದ್ದರೂ ನಮ್ ಬಾಸ್.