Select Your Language

Notifications

webdunia
webdunia
webdunia
webdunia

ಯುವತಿಯನ್ನು ಹತ್ಯೆಗೈದು 20ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ ಭೂಪ, ಬೆಚ್ಚಿದ ಬೆಂಗಳೂರು

Bangalore Crime Case

Sampriya

ಬೆಂಗಳೂರು , ಶನಿವಾರ, 21 ಸೆಪ್ಟಂಬರ್ 2024 (16:18 IST)
ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಮಾದರಿಯಲ್ಲೇ  ಪ್ರಿಯಕರನೊಬ್ಬ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 20 ತುಂಡು ಮಾಡಿ, ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟ ಆಘಾತಕಾರಿ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿದೆ.

ವೀರಣ್ಣ ಆಶ್ರಮದಲ್ಲಿ ಮೂರನೇ ಅಂತಸ್ತಿನಲ್ಲಿ ಯುವತಿಯನ್ನು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು  20 ತುಂಡುಗಳನ್ನು ಮಾಡಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟಿದ್ದಾನೆ. ಕೊಲೆಯಾದ ಯುವತಿ ಅಂತರರಾಜ್ಯದವರಾಗಿದ್ದಾರೆ ಎಂದು ತಿಳಿದುಬಂದಿದೆ.

15ರಿಂದ 20ದಿನಗಳ ಹಿಂದೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಸ್ಥಳಕ್ಕೆ ವೈಯಾಲಿಕಾವಲ್‌ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ. ಪ್ರೀತಿ ವಿಚಾರಕ್ಕೆ ಯುವತಿಯನ್ನು ಕೊಲೆ ಮಾಡಲಾಗಿದೆ.  

ಯುವತಿಯ ಸಂಬಂಧಿಕರು ಬಂದು ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ಅವರು ಕೂಡಲೇ ಪೊಲೀಸನವರಿಗೆ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳಿಗೆ ಗಣೇಶ ಹಬ್ಬ ಮಾಡಲೂ ಪೊಲೀಸರ ಅನುಮತಿ ಬೇಕಾ: ಆರ್ ಅಶೋಕ್ ಕಿಡಿ