Select Your Language

Notifications

webdunia
webdunia
webdunia
Tuesday, 15 April 2025
webdunia

ಹಿಂದೂಗಳಿಗೆ ಗಣೇಶ ಹಬ್ಬ ಮಾಡಲೂ ಪೊಲೀಸರ ಅನುಮತಿ ಬೇಕಾ: ಆರ್ ಅಶೋಕ್ ಕಿಡಿ

R Ashok

Krishnaveni K

ಬೆಂಗಳೂರು , ಶನಿವಾರ, 21 ಸೆಪ್ಟಂಬರ್ 2024 (16:04 IST)
ಬೆಂಗಳೂರು: ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೀತಿದೆ. ಹಿಂದೂಗಳಿಗೆ ಗಣೇಶ ಹಬ್ಬ ಮಾಡಲೂ ಪೊಲೀಸರ ಅನುಮತಿ ಬೇಕಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.
 

ಗಣೇಶ ಹಬ್ಬ ಮೆರವಣಿಗೆ ವೇಳೆ ಸಾಕಷ್ಟು ಕಡೆ ಗಲಾಟೆ ಆಗಿರುವ ನಿದರ್ಶನಗಳು ಕಂಡುಬಂದಿವೆ. ಇದರ ಬಗ್ಗೆ ಏನು ಹೇಳ್ತೀರಿ ಎಂದು ಆರ್ ಅಶೋಕ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ಕಾಂಗ್ರೆಸ್ ಸರ್ಕಾರ ಬಂದರೆ ಇದೆಲ್ಲಾ ಮಾಮೂಲು.  ಕೋಮುವಾದ ಮುಸ್ಲಿಮ್ ಗಳಿಗೆ ಹಬ್ಬ ಇದ್ದ ಹಾಗೆ ನಮ್ಮನ್ನು ಯಾರೂ ಪ್ರಶ್ನೆ ಮಾಡೋರೇ ಇಲ್ಲ ಅನಿಸಿಬಿಡುತ್ತದೆ.

ಅವರನ್ನು ನೀವೇ ಕೇಳಿ ಅದು ನಮ್ಮ ಸರ್ಕಾರ ಅಂತಾರೆ. ಆ ರೀತಿ ಭಾವನೆ ಬಂದಾಗ ಯಾವ ರೋಡ್ ನಲ್ಲೂ ಗಣೇಶ ಎತ್ತಿಕೊಂಡುಹೋಗೋ ಹಾಗಿಲ್ಲ. ಮೊದಲೆಲ್ಲಾ ಗಣಪತಿ ಇಡಲು ಆ ಸಮಿತಿ ನಿರ್ಧಾರ ಮಾಡುತ್ತಿತ್ತು. ಆದರೆ ಇಡೀ ರಾಜ್ಯದಲ್ಲಿ ಗಣೇಶನ ಹಬ್ಬಕ್ಕೆ ತುರ್ತು ಪರಿಸ್ಥಿತಿಯಿದೆ. ಎಲ್ಲಿ ಇಡಬೇಕು, ಯಾವ ವಿಸರ್ಜನೆ ಮಾಡಬೇಕು ಎಲ್ಲವನ್ನು ಪೊಲೀಸಸರು ನಿರ್ಧಾರ ಮಾಡುತ್ತಿದ್ದಾರೆ.

ಗಣೇಶನ ಹಬ್ಬದ ಪ್ರಸಾದವನ್ನೂ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಬೇಕು ಎನ್ನುತ್ತಿದ್ದಾರೆ. ಅಂದರೆ ಒಂದು ರೀತಿಯ ತುಘಲಕ್ ದರ್ಬಾರ್ ನಡೆಯುತ್ತಿದೆ. ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರು ಗುಡ್ಡಕುಸಿತ: ಲಾರಿ ಸಿಕ್ಕರೂ, ಇನ್ನೂ ಪತ್ತೆಯಾಗದ ಅರ್ಜುನ